ಥೈಲ್ಯಾಂಡ್: ಜಗತ್ತಿನಲ್ಲಿ ನಡೆದ ಅನೇಕ ಪವಾಡಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇದು ಪವಾಡವೋ ಅಥವಾ ಬದುಕಿಗಾಗಿ ನಡೀತಿರುವ ಹೋರಾಟವೋ..? ಗೊತ್ತಿಲ್ಲ. ಥೈಲ್ಯಾಂಡ್‍ನ ರಚ್ಬಾರಿ ಪ್ರಾಂತ್ಯದಲ್ಲಿ ಕೋಳಿಯೊಂದು ತಲೆಯಿಲ್ಲದೇ ಒಂದು ವಾರದಿಂದ ಬದುಕುತ್ತಿದೆ.
ಒಂದು ವಾರದ ಹಿಂದಷ್ಟೇ ಚೆನ್ನಾಗಿಯೇ ಇದ್ದ ಕೋಳಿ, ಇದೀಗ ತನ್ನ ತಲೆಯನ್ನು ಹೇಗೋ ಕಳೆದುಕೊಂಡು ಬದುಕುತ್ತಿದೆ. ಇದು ಪಕ್ಷಿ ಹಾಗೂ ವೈದ್ಯಕೀಯ ಲೋಕವನ್ನೇ ತಲೆಕೆಳಗೆ ಮಾಡುವಂತೆ ಮಾಡಿದೆ.
Advertisement
ತಲೆ ಪ್ರತಿ ಜೀವಿಗೂ ಪ್ರಧಾನ ಅಂಗ. ಶರೀರಕ್ಕೆ ಆಧಾರವಾಗಿರುವ ದೇಹವೊಂದು ಇಲ್ಲದೇ ಕೋಳಿ ಬದುಕುತ್ತಿದೆ ಅಂದರೆ ಅದು ಪವಾಡವೇ ಸರಿ. ತಲೆ ಕಳೆದುಕೊಂಡು ರಕ್ತಸಿಕ್ತವಾಗಿದ್ದ ಕೋಳಿಯನ್ನು ಸದ್ಯ ಕೋಳಿ ಮಾಲೀಕರಿಂದ ಪ್ರಾಣಿ ವೈದ್ಯರಾಗಿರುವ ಸುಪಕಡೀ ಅರುಣ್ ತೊಂಗ್ ದತ್ತು ಪಡೆದು ಸಾಕುತ್ತಿದ್ದಾರೆ. ದಿನಾಲು ಕುತ್ತಿಗೆಯಲ್ಲಿರುವ ನಾಳಗಳ ಮೂಲಕ ಕೋಳಿಗೆ ಆಹಾರವನ್ನು ನೀಡುತ್ತಿದ್ದಾರೆ. ಅಲ್ಲದೇ ಗಾಯ ವಾಸಿಯಾಗಲು ಔಷಧ ಮಾಡುತ್ತಿದ್ದಾರೆ.
Advertisement
Advertisement
ಇದೀಗ ಕೋಳಿ ಚೇತರಿಸಿಕೊಳ್ಳುತ್ತಿದ್ದು, ಬದುಕಿನ ಕೊನೆವರೆಗೂ ಕೋಳಿಯನ್ನು ನೋಡಿಕೊಳ್ಳುವ ವಿಶ್ವಾಸವನ್ನು ಪ್ರಾಣಿ ಡಾ. ಅರುಣ್ ತೊಂಗ್ ವ್ಯಕ್ತಪಡಿಸಿದ್ದಾರೆ. ಕೋಳಿಯ ತಲೆ ಕತ್ತರಿಸಿ ಹೋಗಲು ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳೀಯರು ಯಾವುದೋ ಪ್ರಾಣಿಗಳು ತಲೆ ಕತ್ತರಿಸಿ ಹಾಕಿರಬಹುದು ಎಂಬುದಾಗಿ ಶಂಕಿಸಿದ್ದಾರೆ.
Advertisement
ತಲೆ ಇಲ್ಲದೇ 18 ತಿಂಗಳು ಬದುಕಿತ್ತು ಮತ್ತೊಂದು ಕೋಳಿ..!
ಕೋಳಿ ತಲೆ ಇಲ್ಲದೇ ಬದುಕಿರೋದು ಇದೇ ಮೊದಲಲ್ಲ. ಈ ಹಿಂದೆ ಅಂದರೆ 1945-1947ರ ಸಮಯದಲ್ಲಿ ಅಮೆರಿಕಾದಲ್ಲಿ ಶಿರಚ್ಛೇದನಗೊಂಡ ಕೋಳಿಯೊಂದು ಬರೋಬ್ಬರಿ 18 ತಿಂಗಳು ಬದುಕಿತ್ತು. ಅಂದು ಬದುಕಿದ್ದ ಕೋಳಿಯ ಭಾವ ಚಿತ್ರವನ್ನು ಇಂದಿಗೂ ಸಂಗ್ರಹಿಸಿಡಲಾಗಿದೆ.