ಚೆನ್ನೈ: ವ್ಯಕ್ತಿಯೋರ್ವ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದ ಸಸ್ಯಹಾರಿ ಊಟದಲ್ಲಿ ಚಿಕನ್ ಪೀಸ್‍ಗಳು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆತ ಫುಡ್ ಡೆಲಿವರಿ ಕಂಪನಿ ವಿರುದ್ಧ ಕಿಡಿಕಾರಿದ್ದಾರೆ.
ಕೋ ಶೇಶಾ ಎಂಬ ತಮಿಳು ಗೀತೆ ರಚನಕಾರರು ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿದ್ದಾರೆ. ಶೇಷಾ ಅವರು ಸಸ್ಯಹಾರಿಯಾಗಿದ್ದು, ಗೋಬಿ ಮಂಚೂರಿ ವಿತ್ ಕಾರ್ನ್ ಫ್ರೈಡ್ ರೈಸ್‍ನ್ನು ಆರ್ಡರ್ ಮಾಡಿದ್ದರು. ಆದರೆ ಆ ತಿಂಡಿಯಲ್ಲಿ ಅವರಿಗೆ ಚಿಕನ್ ಪೀಸ್ ಇರುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಅವರು ಸ್ವಿಗ್ಗಿಯು ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ. ಘಟನೆ ಸಂಬಂಧಿಸಿ ಸ್ವಿಗ್ಗಿ ಅವರು ಕ್ಷಮೆಯಾಚಿಸಿ 70 ರೂ. ಪರಿಹಾರವನ್ನು ಅಷ್ಟೇ ನೀಡಿದೆ ಎಂದು ಆರೋಪಿಸಿದ್ದಾರೆ.
Advertisement
Found pieces of chicken meat in the “Gobi Manchurian with Corn Fried Rice” that i ordered on @Swiggy from the @tbc_india. What’s worse was Swiggy customer care offered me a compensation of Rs. 70 (!!!) for “offending my religious sentiments”. 1/2 pic.twitter.com/4slmyooYWq
— Ko Sesha (@KoSesha) August 17, 2022
ಘಟನೆಗೆ ಸಂಬಂಧಿಸಿ ಪರ ವಿರೋಧಗಳೆರಡೂ ಚರ್ಚೆ ಆಗುತ್ತಿದ್ದು, ಅನೇಕರು ನಾನ್‍ವೆಜ್ ರೆಸ್ಟೋರೆಂಟ್‍ನಿಂದ ಏಕೆ ಆರ್ಡರ್ ಮಾಡಿದರು. ಈ ರೀತಿ ದೂರು ನೀಡುವುದರಲ್ಲಿ ಅರ್ಥವಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆರ್ಡರ್ ಮಾಡಿದ್ದ ಆಹಾರದಲ್ಲಿ ಹುಳಗಳು – ರೆಸ್ಟೋರೆಂಟ್ ವಿರುದ್ಧ ಮಹಿಳೆ ದೂರು
Advertisement
ಇತ್ತೀಚೆಗಷ್ಟೇ ಜನಪ್ರಿಯ ರೆಸ್ಟೋರೆಂಟ್‍ನಲ್ಲಿ ಆರ್ಡರ್ ಮಾಡಿದ್ದ ಊಟದಲ್ಲಿ ಹುಳುಗಳು ಕಂಡು ಬಂದಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಅಮೆರಿಕದಲ್ಲಿ ತಿರಂಗಾ ರ‍್ಯಾಲಿ – ಗಮನಸೆಳೆದ ಬಾಬಾ ಬುಲ್ಡೋಜರ್