ಸೂಪ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಚಿಕನ್ ಸೂಪ್ ಎಂದರೆ ಎಂತಹವರ ಬಾಯಲ್ಲೂ ನೀರೂರುತ್ತದೆ. ಇಂದು ನಾವು ನೂಡಲ್ಸ್ ಕಾಂಬಿನೇಶನ್‌ನೊಂದಿಗೆ ಚಿಕನ್ ಸೂಪ್ ಹೇಗೆ ಮಾಡುವುದು ಎಂದು ಹೇಳಿಕೊಡುತ್ತೇವೆ. ರುಚಿಕರವಾದ ಚಿಕನ್ ನೂಡಲ್ ಸೂಪ್ (Chicken Noodle Soup) ಅನ್ನು ಒಮ್ಮೆ ನೀವು ಕೂಡಾ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ ಅಥವಾ ತರಕಾರಿ ಸ್ಟಾಕ್ – 900 ಎಂಎಲ್
ಚಿಕನ್ ಬ್ರೆಸ್ಟ್ – 200 ಗ್ರಾಂ
ಸಣ್ಣಗೆ ಹೆಚ್ಚಿದ ಶುಂಠಿ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 1
ಅಕ್ಕಿ ಅಥವಾ ಗೋಧಿ ನೂಡಲ್ಸ್ – 50 ಗ್ರಾಂ
ಸ್ವೀಟ್ ಕಾರ್ನ್ – 2 ಟೀಸ್ಪೂನ್
ಸಣ್ಣಗೆ ಕತ್ತರಿಸಿದ ಮಶ್ರೂಮ್ – 2-3
ಸ್ಪ್ರಿಂಗ್ ಆನಿಯನ್ – 2
ಸೋಯಾ ಸಾಸ್ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಪುದೀನ – 2 ಟೀಸ್ಪೂನ್ ಇದನ್ನೂ ಓದಿ: ಸಖತ್ ಟೇಸ್ಟಿ ಆಗಿರುತ್ತೆ ಚಿಕನ್ ಸ್ಟೀಮ್ಡ್ ಮೊಮೊಸ್ – ಒಮ್ಮೆ ಮಾಡಿ ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬಾಣಲೆಯಲ್ಲಿ ಚಿಕನ್ ಅಥವಾ ತರಕಾರಿ ಸ್ಟಾಕ್ ಅನ್ನು ಹಾಕಿ, ಕುದಿಸಿ.
* ಚಿಕನ್ ಬ್ರೆಸ್ಟ್ ಅನ್ನು ಬಾಣಲೆಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
* ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಸೇರಿಸಿ, ಚಿಕನ್ ಚೆನ್ನಾಗಿ ಬೇಯುವವರೆಗೆ 20 ನಿಮಿಷಗಳ ಕಾಲ ಕುದಿಸಿ.
* ಈಗ ಬೆಂದ ಚಿಕನ್ ಬ್ರೆಸ್ಟ್ ಅನ್ನು ತೆಗೆದು, ಸಣ್ಣಗೆ ಹಾಗೂ ಉದ್ದಕ್ಕೆ ಚೂರುಗಳನ್ನಾಗಿ ಮಾಡಿ.
Advertisement
* ಈಗ ಚೂರು ಮಾಡಿದ ಚಿಕನ್, ನೂಡಲ್ಸ್, ಸ್ವೀಟ್ ಕಾರ್ನ್, ಮಶ್ರೂಮ್, ಸ್ಪ್ರಿಂಗ್ ಆನಿಯನ್ ಹಾಗೂ ಸೋಯಾ ಸಾಸ್ ಅನ್ನು ಸ್ಟಾಕ್‌ಗೆ ಹಾಕಿ 3-4 ನಿಮಿಷಗಳ ವರೆಗೆ ಕುದಿಸಿ.
* ಇದೀಗ ಚಿಕನ್ ನೂಡಲ್ ಸೂಪ್ ತಯಾರಾಗಿದ್ದು, ಪುದೀನ ಎಲೆಗಳನ್ನು ಹಾಕಿ, ಬೌಲ್‌ಗಳಿಗೆ ಸರ್ವ್ ಮಾಡಿ. ಇದನ್ನೂ ಓದಿ: ಮಸಾಲೆಯುಕ್ತ ಕುಶ್ಕಾ ರೈಸ್ ಮಾಡುವ ಸರಳ ವಿಧಾನ