ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟದ ನಡುವೆ ತುಂಬಾ ಸಮಯದ ಅಂತರವಿರುತ್ತದೆ. ಸಂಜೆ ಒಂದಿಷ್ಟು ಸ್ನ್ಯಾಕ್ಸ್ ಹೊಟ್ಟೆಗೆ ಹೋದರೂ ಕೊಂಚ ಹಸಿವು ಖಂಡಿತಾ ಆಗುತ್ತದೆ. ಈ ಸಣ್ಣ ಹಸಿವನ್ನು ತಣಿಸಲು ನಾವಿಂದು ಫಟಾಫಟ್ ಅಂತ ಮಾಡಬಹುದಾದ ಸಿಂಪಲ್ ಚಿಕನ್ ನೂಡಲ್ ಸೂಪ್ ರೆಸಿಪಿಯನ್ನು ನಿಮಗೆ ಹೇಳಿಕೊಡಲಿದ್ದೇವೆ. ಹಾಗಿದ್ರೆ ಹಸಿವು ಎನಿಸಿದಾಗ ಚಿಕನ್ ನೂಡಲ್ ಸೂಪ್ ಅನ್ನು ನೀವು ಕೂಡಾ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ ಸ್ಟಾಕ್ – 3 ಕಪ್
ನೂಡಲ್ಸ್ – 400 ಗ್ರಾಂ
ಮೂಳೆಗಳಿಲ್ಲದ ಬೇಯಿಸಿದ ಚಿಕನ್ – 250 ಗ್ರಾಂ
ಸಿಪ್ಪೆ ಸುಲಿದು ಅರ್ಧಕ್ಕೆ ಹೆಚ್ಚಿಕೊಂಡ ಈರುಳ್ಳಿ – 1
ಸೆಲರಿ – 2 ಕಾಂಡಗಳು
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನಪುಡಿ -ಸ್ವಾದಕ್ಕನುಸಾರ ಇದನ್ನೂ ಓದಿ: ಸ್ನ್ಯಾಕ್ಸ್ಗೆ ಬೆಸ್ಟ್ ಗ್ರೀನ್ ಟೊಮೆಟೋ ಫ್ರೈಸ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಚಿಕನ್ ಸ್ಟಾಕ್ ಹಾಕಿ, ಅದಕ್ಕೆ ಈರುಳ್ಳಿ ಮತ್ತು ಸೆಲರಿ ಸೇರಿಸಿ ಹೆಚ್ಚಿನ ಉರಿಯಲ್ಲಿ ಕುದಿಸಿ.
* ಚಿಕನ್ ಅನ್ನು ಚೂರುಗಳಾಗಿ ಕತ್ತರಿಸಿ, ಚಿಕನ್ ಸ್ಟಾಕ್ ಕುದಿ ಬಂದ ಬಳಿಕ ಅದಕ್ಕೆ ಸೇರಿಸಿ.
* ಬಳಿಕ ನೂಡಲ್ಸ್ ಅನ್ನು ಸೇರಿಸಿ 8 ನಿಮಿಷ ಬೇಯಿಸಿಕೊಳ್ಳಿ.
* ಈಗ ಒಂದು ಸ್ಪೂನ್ ಸಹಾಯದಿಂದ ಈರುಳ್ಳಿ ಹಾಗೂ ಸೆಲರಿಯನ್ನು ತೆಗೆದು ಹಾಕಿ.
* ಉಪ್ಪು ಹಾಗೂ ಮೆಣಸಿನಪುಡಿಯನ್ನು ಸೇರಿಸಿ, ಮಿಶ್ರಣ ಮಾಡಿ 1-2 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.
* ಇದೀಗ ಚಿಕನ್ ನೂಡಲ್ ಸೂಪ್ ತಯಾರಾಗಿದ್ದು, ಬೌಲ್ಗಳಲ್ಲಿ ಬಡಿಸಿ, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಟೇಸ್ಟಿ ಆಲೂ ಪಾಲಕ್ ಕಟ್ಲೆಟ್ ಟ್ರೈ ಮಾಡಿ ನೋಡಿ..!