ನೀವು ಖಾರವಾದ ಭಾರತೀಯ ನಾನ್‌ವೆಜ್ ಅಡುಗೆ ಸವೀಬೇಕು ಎಂದೆನಿಸಿದ್ರೆ ಚಿಕನ್ ಮದ್ರಾಸ್ ರೆಸಿಪಿಯನ್ನು ಖಂಡಿತಾ ಇಷ್ಟಪಡುತ್ತೀರಿ. ಜಗತ್ತಿನಲ್ಲಿ ಚಿಕನ್ ರೆಸಿಪಿ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮಾಡಲಾಗುತ್ತದೆ. ಕೆಲವೊಂದುಕಡೆ ಹೆಚ್ಚು ಖಾರ ಬಳಸುವುದಿಲ್ಲ ಹಾಗೂ ಕೆಲವೊಂದು ಕಡೆ ಹೆಚ್ಚು ಖಾರ ಬಳಸಲಾಗುತ್ತದೆ. ಭಾರತದಲ್ಲೂ ಅಷ್ಟೇ ಒಂದೊಂದು ಭಾಗದಲ್ಲಿ ಮಾಡೋ ಖಾದ್ಯ ಒಂದೊಂದು ರೀತಿಯ ರುಚಿ ನೀಡುತ್ತದೆ. ಚಿಕನ್ ಮದ್ರಾಸ್ ಭಾರತದಲ್ಲಿ ಫೇಮಸ್ ಆಗಿರೋ ನಾನ್‌ವೆಜ್ ರೆಸಿಪಿಗಳಲ್ಲೊಂದು. ಚಿಕನ್ ಮದ್ರಾಸ್ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ – 700 ಗ್ರಾಂ (ಬ್ರೆಸ್ಟ್, ತೊಡೆ ಭಾಗಗಳು ಸೂಕ್ತ)
ಹಸಿರು ಮೆಣಸಿನಕಾಯಿ – 3
ಎಣ್ಣೆ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – 2
ತುರಿದ ಶುಂಠಿ – 1 ಇಂಚು
ತುರಿದ ಬೆಳ್ಳುಳ್ಳಿ – 4
ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ಅರಿಶಿನ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಜಾಯಿಕಾಯಿ ಪುಡಿ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಟೊಮೆಟೊ – 200 ಗ್ರಾಂ
ಹೆಚ್ಚಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
ಗರಂ ಮಸಾಲೆ ಪುಡಿ – 1 ಟೀಸ್ಪೂನ್ ಇದನ್ನೂ ಓದಿ: ಮಕ್ಕಳಿಗೆ ಇಷ್ಟವಾಗುತ್ತೆ ವೆಸ್ಟರ್ನ್ ಟಚ್‌ನ ಕ್ರೀಮಿ ಗಾರ್ಲಿಕ್ ಚಿಕನ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಚಿಕನ್‌ನಲ್ಲಿರುವ ಚರ್ಮದ ಭಾಗಗಳನ್ನು ತೆಗೆದುಹಾಕಿ, ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ.
* ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಬಳಿಕ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
* ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಅರ್ಧ ನಿಮಿಷ ಫ್ರೈ ಮಾಡಿ.
* ಬಳಿಕ ಕೆಂಪು ಮೆಣಸಿನ ಪುಡಿ, ಜೀರಿಗೆ, ಕೊತ್ತಂಬರಿ, ಅರಿಶಿನ ಮತ್ತು ಉಪ್ಪು ಸೇರಿಸಿ, ಬೆರೆಸಿ.
* ಚಿಕನ್ ಹಾಗೂ 50 ಮಿ.ಲೀ ನೀರನ್ನು ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ.
* ಬಳಿಕ ಜಾಯಿಕಾಯಿ ಮತ್ತು ಟೊಮೆಟೊ ಸೇರಿಸಿ 10 ನಿಮಿಷ ಬೇಯಿಸಿಕೊಳ್ಳಿ.
* ಗರಂ ಮಸಾಲೆ ಸೇರಿಸಿ ಮಿಶ್ರಣ ಮಾಡಿ.
* ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ ಉರಿಯನ್ನು ಆಫ್ ಮಾಡಿ.
* ಇದೀಗ ಚಿಕನ್ ಮದ್ರಾಸ್ ತಯಾರಾಗಿದ್ದು, ಬಾಸ್ಮತಿ ರೈಸ್ ಅಥವಾ ಚಪಾತಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಬಿರಿಯಾನಿಗೆ ಸೂಪರ್ ಸೈಡ್ ಡಿಶ್ – ಮಟನ್ ದಾಲ್ಚಾ ರೆಸಿಪಿ