ಭಾನುವಾರ ಬಂತು ಎಂದರೆ ನಾನ್‍ವೆಜ್ ಪ್ರಿಯರಿಗೆ ಹಬ್ಬ. ಈ ಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು ಇಂದು ನಿಮ್ಮ ಮನೆಯಲ್ಲಿ ‘ಚಿಕನ್ ಲಿವರ್ ಫ್ರೈ’ ಮಾಡಿ. ಈ ರೆಸಿಪಿ ರುಚಿಕರವಾಗಿರುವುದರ ಜೊತೆ ಸಿಂಪಲ್ ಆಗಿ ಇರುತ್ತೆ. ಮನೆಯವರಿಗೆ ಚಿಕನ್ ಫ್ರೈ, ಸಾರು ಮಾಡುವ ಬದಲು ಈ ರೆಸಿಪಿಯನ್ನು ಮಾಡಲು ಬಲು ಸುಲಭ. ಮನೆಯಲ್ಲಿಯೇ ಟ್ರೈ ಮಾಡಿ ಈ ರೆಸಿಪಿ.
Advertisement
ಬೇಕಾಗಿರುವ ಪದಾರ್ಥಗಳು
* ಕೋಳಿ ಲಿವರ್ – 300 ಗ್ರಾಂ
* ಕೊತ್ತಂಬರಿ ಪುಡಿ – 1/2 ಟೀಚಮಚ
* ಕಟ್ ಮಾಡಿದ ಈರುಳ್ಳಿ – 1 ಕಪ್
* ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ – 1/2 ಟೀಚಮಚ
* ಟೊಮೆಟೊ – ಅರ್ಧ ಕಪ್
* ಎಣ್ಣೆ – 2 ಟೇಬಲ್ಸ್ಪೂನ್
* ಟೊಮೆಟೊ ಕೆಚಪ್ – 1 ಚಮಚ
* ಜೀರಿಗೆ ಪುಡಿ – 1/2 ಟೀಚಮಚ
* ಗರಂ ಮಸಾಲಾ ಪುಡಿ – 1/2 ಟೀಚಮಚ
* ಹಸಿರು ಮೆಣಸಿನಕಾಯಿ – 4
* ಕೊತ್ತಂಬರಿ ಸೊಪ್ಪು – 1 ಕಪ್
* ಸೋಯಾ ಸಾಸ್ – 2 ಟೀಸ್ಪೂನ್
Advertisement
Advertisement
ಮಾಡುವ ವಿಧಾನ:
* ಮೊದಲು ಕೋಳಿ ಲಿವರ್ ಸರಿಯಾಗಿ ತೊಳೆದು, ಸುಮಾರು 3 ಭಾಗಗಳಾಗಿ ಕಟ್ ಮಾಡಿ.
* ಮಧ್ಯಮ ಉರಿಯಲ್ಲಿ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ, ಕಟ್ ಮಾಡಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಹಾಕಿ ಒಂದು ನಿಮಿಷ ಫ್ರೈ ಮಾಡಿ. ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ಈ ಮಿಶ್ರಣಕ್ಕೆ ಕಟ್ ಮಾಡಿದ ಲಿವರ್ ಸೇರಿಸಿ ಅದಕ್ಕೆ ಜೀರಿಗೆ, ಕೊತ್ತಂಬರಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಫ್ರೈ ಮಾಡಿ.
* ಲಿವರ್‌ನಿಂದ ಎಣ್ಣೆ ಹೊರಬರುವವರೆಗೆ ಬೆರೆಸಿ. 10 ನಿಮಿಷಗಳ ಕಾಲ ಫ್ರೈ ಮಾಡಿ. ಇದಕ್ಕೆ ಸೋಯಾ ಸಾಸ್, ಕೆಚಪ್ ಮತ್ತು ಕಟ್ ಮಾಡಿದ ಕೊತ್ತಂಬರಿ ಸೇರಿಸಿ 10 ನಿಮಿಷಗಳ ಕಾಲ ಫ್ರೈ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.