ಪ್ರತಿದಿನ ಕೆಲಸದ ಒತ್ತಡಗಳ ನಡುವೆ ಸರಿಯಾದ ಅಡುಗೆ ಮಾಡಿಕೊಳ್ಳಲು ಸಮಯ ಸಾಕಾಗಲ್ಲ. ಇನ್ನು ಪತಿ-ಪತ್ನಿ ಉದ್ಯೋಗಿಗಳಾಗಿದ್ರೆ ಮಕ್ಕಳಿಗೂ ಒಂದೇ ರೀತಿಯ ತಿಂಡಿ ತಿಂದು ಬೇಸರವಾಗಿರುತ್ತದೆ. ಭಾನುವಾರ ರಜೆ ದಿನ. ಏನಾದ್ರೂ ಸ್ಪೆಷಲ್ ಬಾಡೂಟ ಮಾಡೋಣ ಅಂತ ಪ್ಲಾನ್ ಮಾಡಿಕೊಂಡಿದ್ದರೆ ಒಮ್ಮೆ ಚಿಕನ್ ಬೋಂಡಾ ಟ್ರೈ ಮಾಡಿ. ಒಮ್ಮೆ ತಿಂದ್ರೆ ಪದೇ ಪದೇ ಬೇಕೆನಿಸುವ ಚಿಕನ್ ಬೋಂಡಾ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
* ಮೊಳೆ ಇಲ್ಲದ ಚಿಕನ್ ಪೀಸ್ – ಅರ್ಧ ಕೆಜಿ
* ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
* ಜೋಳದ ಹಿಟ್ಟು- ಮುಕ್ಕಾಲು ಬಟ್ಟಲು
* ಮೈದಾ ಹಿಟ್ಟು- ಅರ್ಧ ಬಟ್ಟಲು
* ಪೆಪ್ಪರ್ ಪುಡಿ – ಖಾರಕ್ಕೆ ತಕ್ಕಷ್ಟು
* ಸೋಯಾ ಸಾಸ್ – 1 ಸ್ಪೂನ್
* ಕೆಂಪು ಮೆಣಸಿನಕಾಯಿ ಪುಡಿ – 1 ಸ್ಪೂನ್
* ಎಣ್ಣೆ – ಕರಿಯಲು
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಮೊಳೆ ಇಲ್ಲದ ಚಿಕನ್ ಅನ್ನು ಸಣ್ಣಗೆ ಕತ್ತರಿಸಿಕೊಂದು ಚೆನ್ನಾಗಿ ನೀರಿನಲ್ಲಿ ತೊಳೆದಿಟ್ಟುಕೊಳ್ಳಬೇಕು.
* ಬಳಿಕ ತೊಳೆದ ಚಿಕನ್ ಅನ್ನು ಒಂದು ಮಿಕ್ಸಿಂಗ್ ಬೌಲ್‍ಗೆ ಹಾಕಿಕೊಳ್ಳಿ.
* ಬೌಲ್‍ಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ಖಾರದ ಪುಡಿ, ಪೆಪ್ಪರ್ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 15ರಿಂದ 20 ನಿಮಿಷ ನೆನೆಯಲು ಬಿಡಿ.
* ಈಗ ಒಂದು ಬೌಲ್‍ಗೆ ಜೋಳದ ಹಿಟ್ಟು, ಮೈದಾ ಹಿಟ್ಟು, ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ನೀರು ಹಾಕಿಕೊಂಡು ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
* ಹಿಟ್ಟು ತೀರಾ ತೆಳ್ಳಗೆ ಇರಬಾರದು. ಚಿಕನ್ ಪೀಸ್ ಅನ್ನು ಹಿಟ್ಟಿನಲ್ಲಿ ಅದ್ದಬೇಕು.
* ಈಗ ಕಾದ ಎಣ್ಣೆಗೆ ಹಿಟ್ಟಿನಲ್ಲಿ ಅದ್ದಿದ್ದ ಚಿಕನ್ ಪೀಸ್ ಅನ್ನು ಹಾಕಿ ಗೋಲ್ಡನ್ ಬ್ರೌನ್ ಆಗೋ ತನಕ ಬೇಯಿಸಿ ಸವಿಯಿರಿ.
* ಸರ್ವ್ ಮಾಡುವಾಗ ಈರುಳ್ಳಿ, ನಿಂಬೆಹಣ್ಣಿನ ಜೊತೆ ಸರ್ವ್ ಮಾಡಿದ್ರೆ ರುಚಿ ಇನ್ನಷ್ಟು ಹೆಚ್ಚುತ್ತದೆ.