ಚಿತ್ರದುರ್ಗ: ಕ್ವಿಂಟಾಲ್‌ಗಟ್ಟಲೇ ಚಿಕನ್ ಬಿರಿಯಾನಿ (Chicken Biriyani) ನೆಲದ ಪಾಲಾಗಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದ ಶೋಷಿತರ ಸಮಾವೇಶದಲ್ಲಿ ಬೆಳಕಿಗೆ ಬಂದಿದೆ.
ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶಕ್ಕೆ (Exploited Communities Awareness Conference) ಬರುವ ಜನರಿಗೆ ವಿತರಿಸಲೆಂದು ಸಿದ್ಧಪಡಿಸಿದ್ದ ಬಿರಿಯಾನಿ ನೆಲದಪಾಲಾಗಿದೆ. ಸಮಾವೇಶಕ್ಕೆ ನಿರೀಕ್ಷೆಯಷ್ಟು ಜನರು ಬಾರದ ಹಿನ್ನೆಲೆಯಲ್ಲಿ ಉಳಿದ ಚಿಕನ್ ಬಿರಿಯಾನಿ ಹಾಗೂ ಪಲಾವ್ ಸಂಪೂರ್ಣವಾಗಿ ನೆಲದ ಪಾಲಾಗಿದೆ. ಇದನ್ನೂ ಓದಿ: ಗಣರಾಜ್ಯೋತ್ಸವ ನೃತ್ಯದಲ್ಲಿ ಕಮಲದ ಹೂವನ್ನು ಎದ್ದು ಕಾಣುವಂತೆ ತೋರಿಸಿದ್ದರು – ಶಿವಲಿಂಗೇಗೌಡ
Advertisement
Advertisement
ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್ ಭಾಗಿಯಾಗಿದ್ದರು. ಹಸಿವಿನಿಂದ ಜನ ಇರಬಾರದು ಅಂತ ಹೇಳಿ ಬಿರಿಯಾನಿಯನ್ನು ತಯಾರಿಸಲಾಗಿತ್ತು. ಈ ಸಂದರ್ಭದಲ್ಲಿ ಅನ್ನವನ್ನು ನೆಲದ ಪಾಲು ಮಾಡಿರುವ ಆಯೋಜಕರ ವಿರುದ್ಧ ಜನಸಾಮನ್ಯರು ಕಿಡಿಕಾರಿದ್ದಾರೆ. ಉಳಿದ ಆಹಾರವನ್ನು ಅನಾಥಶ್ರಮ ಅಥವಾ ನಿರಾಶ್ರಿತರ ಕೇಂದ್ರಕ್ಕೆ ನೀಡದೇ ನೆಲದಪಾಲು ಮಾಡಿದ್ದು ವಿಪರ್ಯಾಸ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ರಾಜ್ಯಾದ್ಯಂತ ಹೋರಾಟದ ಕಿಚ್ಚು – ಮಂಡ್ಯದಲ್ಲಿಂದು ಹೆಚ್‌ಡಿಕೆ, ರೆಡ್ಡಿ ಪಾದಯಾತ್ರೆ