Districts
ಬೆಲೆ ಏರಿಕೆಯಾದ್ರೂ ಕಡಿಮೆಯಾಗಿಲ್ಲ ಮಟನ್ ಡಿಮ್ಯಾಂಡ್

ರಾಮನಗರ: ಒಂದೆಡೆ ಲೋಕಸಭಾ ಚುನಾವಣೆಯ ನಡುವೆ ಬಂದಿರುವ ಯುಗಾದಿಯ ಹೊಸ ತೊಡಕಿನ ದಿನ ಮಾಂಸದ ಖರೀದಿ ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಜೋರಾಗಿಯೇ ಇದೆ.
ಬಹುತೇಕ ಎಲ್ಲ ಮಟನ್ ಸ್ಟಾಲ್ ಹಾಗೂ ಚಿಕನ್ ಪೌಲ್ಟ್ರಿ ಸೆಂಟರ್ ಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಮಾಂಸವನ್ನ ಖರೀದಿ ಮಾಡುತ್ತಿದ್ದಾರೆ. ರಾಮನಗರದ ಪ್ರತಿ ಮಟನ್ ಸ್ಟಾಲ್‍ಗಳು ಜನರಿಂದ ಕಿಕ್ಕಿರಿದು ತುಂಬಿದ್ದು, ಮಾಂಸ ಖರೀದಿಯಲ್ಲಿ ನಿರತರಾಗಿದ್ದಾರೆ.
ಸಾಮಾನ್ಯ ದಿನಗಳಲ್ಲಿ ಮೇಕೆ ಹಾಗೂ ಕುರಿ ಮಾಂಸ ಕೆ.ಜಿಗೆ 380 ರಿಂದ 410 ರೂಪಾಯಿಗಳ ವರೆಗೆ ಇರುತ್ತಿತ್ತು. ಆದರೆ ಇದೀಗ ಹಬ್ಬದ ವಿಶೇಷವಾಗಿರುವುದರಿಂದ ಪ್ರತಿ ಮಟನ್ ಸ್ಟಾಲ್‍ಗಳಲ್ಲೂ ಮಾಂಸದ ದರವನ್ನ ಏರಿಕೆ ಮಾಡಿದ್ದಾರೆ. ಪ್ರತಿ ಕೆ.ಜಿ ಮಾಂಸಕ್ಕೆ 450 ರೂ.ಗಳಿಂದ 500 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಮಾಂಸದ ದರ ಏರಿಕೆಯಾದರೂ ಸಹ ಜನರು ತಾ ಮುಂದು ನಾ ಮುಂದು ಎಂದು ಬೆಳಗ್ಗಿನಿಂದಲೂ ಮಾಂಸ ಖರೀದಿಗೆ ನಿಂತಿದ್ದಾರೆ.
ಇತ್ತ ಹಬ್ಬಕ್ಕೆ ಮಾಂಸದಡುಗೆ ಮಾಡಲು ಮಂಡ್ಯದ ಎಲ್ಲ ಮಾಂಸದಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನೂರಾರು ಜನ ನಿಂತು ಮಟನ್ ಖರೀದಿಸುತ್ತಿದ್ದಾರೆ. ಸದ್ಯ ಜನರು ಚುನಾವಣೆಯ ಯೋಚನೆ ಬಿಟ್ಟು ಮಾಂಸದಡುಗೆ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ.
