– 3 ಅಡಿ ಎತ್ತರದ ಬಾಬಾಗೆ 57 ವರ್ಷ ವಯಸ್ಸು
– 12 ವರ್ಷಗಳಿಗೊಮ್ಮೆ ನಡೆಯೋ ಕುಂಭ ಮೇಳಕ್ಕೆ ಸಿದ್ಧತೆ ಹೇಗಿದೆ?
ಲಕ್ನೋ: ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ ಎನಿಸಿರುವ ಕುಂಭ ಮೇಳಕ್ಕೆ (Kumbh Mela) ಉತ್ತರ ಪ್ರದೇಶ ಸಜ್ಜಾಗಿದೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು, ಯಾತ್ರಿಕರು ಆಗಮಿಸುತ್ತಿದ್ದಾರೆ. ಸಾಧು-ಸಂತರು ಕುಂಭ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೇಳಕ್ಕೆ ಸಕಲ ಸಿದ್ಧತೆ ನಡೆದಿದೆ. ಕುಂಭ ಮೇಳಕ್ಕೆ ಛೋಟು ಬಾಬಾ (Chhotu Baba) ಅವರು ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.
Advertisement
32 ವರ್ಷಗಳಿಂದ ಸ್ನಾನ ಮಾಡದ ಗಂಗಾಪುರಿ ಮಹಾರಾಜರು ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಗಂಗಾಪುರಿ ಮಹಾರಾಜ್ ಅವರು ಛೋಟು ಬಾಬಾ ಅಸ್ಸಾಂನ ಕಾಮಾಖ್ಯ ಪೀಠದವರಾಗಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮಹಾಕುಂಭ ಮೇಳ – 5,500 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ
Advertisement
Advertisement
‘ಇದು ಮಿಲನ ಮೇಳ. ಆತ್ಮಕ್ಕೆ ಆತ್ಮದ ಸಂಪರ್ಕವಿರಬೇಕು. ಅದಕ್ಕಾಗಿಯೇ ನಾನು ಇಲ್ಲಿದ್ದೇನೆ’ ಎಂದು ಬಾಬಾ ತಿಳಿಸಿದ್ದಾರೆ. 57 ವರ್ಷ ವಯಸ್ಸಿನ ಬಾಬಾ ಅವರು ಮೂರು ಅಡಿ ಎತ್ತರವಿದ್ದಾರೆ. ‘ನಾನು 3 ಅಡಿ 8 ಇಂಚು ಎತ್ತರ ಇದ್ದೇನೆ. ನನಗೆ 57 ವರ್ಷ. ಇಲ್ಲಿಗೆ ಬರಲು ನನಗೆ ತುಂಬಾ ಸಂತೋಷವಾಗಿದೆ. ನೀವು ಸಹ ಇಲ್ಲಿದ್ದೀರಿ, ಅದರಲ್ಲಿಯೂ ನಾನು ಸಂತೋಷವಾಗಿದ್ದೇನೆ’ ಎಂದು ಬಾಬಾ ಖುಷಿ ವ್ಯಕ್ತಪಡಿಸಿದ್ದಾರೆ.
Advertisement
ಗಂಗಾಪುರಿ ಮಹಾರಾಜರು ಕಳೆದ 32 ವರ್ಷಗಳಿಂದ ಸ್ನಾನ ಮಾಡಿಲ್ಲ. ಕಳೆದ 32 ವರ್ಷಗಳಿಂದ ಈಡೇರದ ಬಯಕೆ ನನ್ನಲ್ಲಿದೆ ಎಂಬ ಕಾರಣಕ್ಕೆ ನಾನು ಸ್ನಾನ ಮಾಡುವುದಿಲ್ಲ. ಗಂಗಾಸ್ನಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ.
12 ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತದೆ. ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಪ್ರಯಾಗ್‌ರಾಜ್‌ನಲ್ಲಿ ಅಪಾರ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಅನಾಹುತಗಳನ್ನು ತಡೆಗಟ್ಟಲು ಜಿಲ್ಲಾಡಳಿತವು ಭಕ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಶೇಷವಾಗಿ ಜನಸಂದಣಿ ನಿರ್ವಹಣೆಗಾಗಿ ಮತ್ತು ಬೆಂಕಿಯ ಅವಘಡಗಳನ್ನು ತಪ್ಪಿಸಲು ಸುರಕ್ಷತೆ ಕ್ರಮವಹಿಸಿದೆ. ಇದನ್ನೂ ಓದಿ: ಕೆಲವರು ಗ್ರಾಮೀಣ ಭಾಗದಲ್ಲಿ ಜಾತಿ ರಾಜಕಾರಣದ ಹೆಸರಿನಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ: ಮೋದಿ
ಈ ಬಾರಿ ಮಹಾಕುಂಭಕ್ಕೆ ಭಕ್ತಾದಿಗಳ ಸುರಕ್ಷತೆಗೆ ಸಿಬ್ಬಂದಿ ನಿಯೋಜನೆ ಜೊತೆಗೆ ತಾಂತ್ರಿಕ ಪರಿಕರಗಳನ್ನು ಆಡಳಿತ ಮಂಡಳಿ ಆಯ್ಕೆ ಮಾಡಿದೆ. ಕ್ವಿಕ್ ರೆಸ್ಪಾನ್ಸ್ ವೆಹಿಕಲ್‌ಗಳು, ಯಾವುದೇ ರೀತಿಯ ಭೂಪ್ರದೇಶದಲ್ಲಿ ಚಲಿಸಬಲ್ಲ ಎಲ್ಲಾ ಭೂಪ್ರದೇಶ ವಾಹನಗಳು (ಎಟಿವಿಗಳು), ಅಗ್ನಿಶಾಮಕ ರೋಬೋಟ್‌ಗಳು ಮತ್ತು ಫೈರ್ ಮಿಸ್ಟ್ ಬೈಕ್‌ಗಳನ್ನು ನಿಯೋಜಿಸಿದೆ. ಅಗ್ನಿಶಾಮಕ ದೋಣಿಗಳನ್ನು ತರಲಾಗಿದೆ. ದೋಣಿಗಳು ಬೆಂಕಿಯನ್ನು ನಂದಿಸಲು ನದಿಯ ನೀರನ್ನು ಬಳಸುತ್ತವೆ.
ಯಾತ್ರಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. UTS (ಅನ್ ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್) ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಯಾತ್ರಾರ್ಥಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು QR ಕೋಡ್ ಅನ್ನು ಸರಳವಾಗಿ ಸ್ಕ್ಯಾನ್ ಮಾಡಬಹುದು. ಈ ಅಪ್ಲಿಕೇಶನ್ ಪ್ರಯಾಣಿಕರು ದೀರ್ಘ ಸರತಿ ಸಾಲಿನಲ್ಲಿ ನಿಲ್ಲದೆ ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿಸುತ್ತದೆ.
ಶಾಹಿ ಸ್ನಾನ (ರಾಜಮನೆತನದ ಸ್ನಾನ) ಎಂದು ಕರೆಯಲ್ಪಡುವ ಪ್ರಮುಖ ಸ್ನಾನದ ಆಚರಣೆಗಳು ಜನವರಿ 14 (ಮಕರ ಸಂಕ್ರಾಂತಿ), ಜನವರಿ 29 (ಮೌನಿ ಅಮಾವಾಸ್ಯೆ), ಮತ್ತು ಫೆಬ್ರವರಿ 3 (ಬಸಂತ್ ಪಂಚಮಿ) ರಂದು ನಡೆಯುತ್ತವೆ. ಇದನ್ನೂ ಓದಿ: ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ತೆರೆಯಲು ಪೋಷಕರ ಅನುಮತಿ ಕಡ್ಡಾಯ?