ಮಂಗಳೂರು: ಭೂಗತ ಪಾತಕಿ ಛೋಟಾ ರಾಜನ್ ಸಹಚರ ವಿನೇಶ್ ಶೆಟ್ಟಿ ಎಂಬಾತನನ್ನು ಮಂಗಳೂರಿನ ಕೋಣಾಜೆ ಪೊಲೀಸರು ಮುಂಬೈನ ಥಾಣೆಯಲ್ಲಿ ಬಂಧಿಸಿದ್ದಾರೆ.
ಮಂಗಳೂರು ಮುಡಿಪು ಬಳಿ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ವಿನೇಶ್ ಶೆಟ್ಟಿ ಆರೋಪಿಯಾಗಿದ್ದನು. 2003 ರಲ್ಲಿ ವೇಣುಗೋಪಾಲ್ ನಾಯಕ್ ಮತ್ತು ಸಂತೋಷ್ ಶೆಟ್ಟಿ ಎಂಬವರ ಕೊಲೆ ನಡೆದಿತ್ತು. ಪ್ರಕರಣದಲ್ಲಿ ಬಂಧಿತನಾಗಿ ವಿನೇಶ್ ಮಂಗಳೂರು ನ್ಯಾಯಾಲಯಕ್ಕೆ ಹಾಜರಾಗಿದ್ದನು. 2005ರಲ್ಲಿ ಜಾಮೀನು ಪಡೆದ ವಿನೇಶ್ ಶೆಟ್ಟಿ ತಲೆಮರೆಸಿಕೊಂಡಿದ್ದನು. ವಿನೇಶ್ ಛೋಟಾ ರಾಜನ್ ಗ್ಯಾಂಗ್ ನಲ್ಲಿ ಸಕ್ರೀಯನಾಗಿದ್ದ ಎಂದು ಹೇಳಲಾಗುತ್ತಿದೆ.
ಉಡುಪಿ ಜಿಲ್ಲೆಯ ಶಿರ್ವ ಮೂಲದ ನಿವಾಸಿಯಾಗಿರುವ ವಿನೇಶ್ ಶೆಟ್ಟಿಯ ಬಂಧನಕ್ಕಾಗಿ ಪೊಲೀಸರು ಮಂಗಳೂರು ಕೋರ್ಟಿನಿಂದ ವಾರೆಂಟ್ ಪಡೆದು ಅರೆಸ್ಟ್ ಮಾಡಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಥಾಣೆ ನ್ಯಾಯಾಲಯಕ್ಕೆ ಹಾಜರಾಗಿದ್ದ ವೇಳೆ ಪೊಲೀಸರು ಆರೋಪಿ ವಿನೇಶ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.