ರಾಯ್‍ಪುರ: ಛತ್ತೀಸ್‍ಗಢದ ದಾಂತೇವಾಡ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಹತ್ಯೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ, ಜಿಲ್ಲಾ ರಿಸರ್ವ್ ಗಾರ್ಡ್(ಡಿಆರ್‍ಜಿ) ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು. ಈ ವೇಳೆ ಅರನ್‍ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಂಡರಾಸ್ ಗ್ರಾಮದ ಬಳಿ ಕಾಡಿನಲ್ಲಿ ಬೆಳಗ್ಗೆ 5:30 ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ ಎಂದರು. ಇದನ್ನೂ ಓದಿ: ಎಂಜಿನಿಯರ್ ಮನೆಯಲ್ಲಿ 4 ಗಂಟೆ ದಾಳಿ ನಂತರ 60 ಲಕ್ಷ ರೂ. ಪತ್ತೆ
Advertisement
Advertisement
ಈ ವೇಳೆ ಇಬ್ಬರು ನಕ್ಸಲ್ ಮಹಿಳೆಯರಾದ ಹಿಡ್ಮೆ ಕೊಹ್ರಾಮೆ ಮತ್ತು ಪೊಜ್ಜೆ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ. ಈ ನಕ್ಸಲ್ ಮಹಿಳೆಯರನ್ನು ಹಿಡಿದುಕೊಟ್ಟರೆ ಕ್ರಮವಾಗಿ 5 ಲಕ್ಷ ಮತ್ತು 1 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ತಿಳಿಸಿದರು.
Advertisement
ಕೊಹ್ರಾಮೆ ಮಾವೋವಾದಿಗಳ ಮಲಂಗೇರ್ ಪ್ರದೇಶ ಸಮಿತಿಯ ಸದಸ್ಯೆ ಆಗಿದ್ದಳೆ, ಪೊಜ್ಜೆ ಮಾವೋವಾದಿಗಳ ಸಾಂಸ್ಕøತಿಕ ವಿಭಾಗದಲ್ಲಿ ಪ್ರಭಾರಿಯಾಗಿದ್ದಳು. ಇದನ್ನೂ ಓದಿ: ಕಪ್ಪು ಬಟ್ಟೆ ಮೇಲೆ MES ಎಂದು ಬರೆದು ಚಪ್ಪಲಿ ಏಟು ಕೊಟ್ಟ ರಾಯಣ್ಣನ ಅಭಿಮಾನಿಗಳು
Advertisement
ಈ ದಾಳಿಯ ವೇಳೆ ಸ್ಥಳೀಯವಾಗಿ ತಯಾರಿಸಿದ ಮೂರು ರೈಫಲ್‍ಗಳು, ಮದ್ದುಗುಂಡುಗಳು, ಸಂವಹನ ಸಾಧನಗಳು, ಸ್ಫೋಟಕ ವಸ್ತುಗಳು ಮತ್ತು ಕ್ಯಾಂಪಿಂಗ್ ವಸ್ತುಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.