ರಾಯ್ಪುರ: ತರಗತಿಯಲ್ಲಿ ಕುಡಿದು ಮಲಗಿದ್ದ ಶಿಕ್ಷಕನನ್ನು ಜಿಲ್ಲಾಧಿಕಾರಿ ಅಮಾನತು ಮಾಡಿರುವ ಘಟನೆ ಛತ್ತೀಸ್‍ಗಢದ ಆಶ್‍ಪುರದಲ್ಲಿ ನಡೆದಿದೆ.
ಆಶ್‍ಪುರ ಜಿಲ್ಲೆಯ ತುರಾಂಗ್‍ಖಾರ್ ಎಂಬ ಹಳ್ಳಿಯ ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬ ಶಾಲೆಗೆ ಮದ್ಯಪಾನ ಮಾಡಿಕೊಂಡು ಬಂದು ಮಕ್ಕಳಿಗೆ ಪಾಠ ಮಾಡದೇ ತರಗತಿಯಲ್ಲಿ ಮಲಗಿದ್ದ.
ಕುಡಿದು ಶಾಲೆಗೆ ಬಂದಿದ್ದ ಶಿಕ್ಷಕ ತರಗತಿಯಲ್ಲಿ ಪಾಠ ಮಾಡದೇ ಮಾಲಗಿದ್ದನ್ನು ಅಲ್ಲಿನ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ನಂತರ ಅವನನ್ನು ಎಬ್ಬಿಸಿ ಪ್ರಶ್ನೆ ಮಾಡಿದ್ದಕ್ಕೆ ನಾನು ಮದ್ಯಪಾನ ಮಾಡಿಲ್ಲ ಎಂದು ಹೇಳಿದ್ದಾನೆ. ಈಗ ಈ ವಿಚಾರವಾಗಿ ಸ್ಥಳೀಯರು ಮಕ್ಕಳ ಬಳಿ ಮಾಹಿತಿ ಪಡೆದು ಶಿಕ್ಷಕನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಜನರು ಒತ್ತಾಯ ಮಾಡಿದ್ದರು.
ಈ ವಿಚಾರವಾಗಿ ಮಾತನಾಡಿರುವ ಜಿಲ್ಲಾ ಶಿಕ್ಷಣಾಧಿಕಾರಿ ಬಾಲಾ ರಾಮ್ ಧ್ರುವ ಈ ಘಟನೆಯ ಬಗ್ಗೆ ಪ್ರಸ್ತುತ ವರದಿಗಾಗಿ ಕಾಯಲಾಗುತ್ತಿದ್ದು, ವರದಿ ಬಂದಲ್ಲಿ ಅ ವರದಿಯ ಆಧಾರದ ಮೇಲೆ ಅ ಶಿಕ್ಷಕನಿಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.