ರಾಯ್ಪುರ: ಬಡವರಿಗಾಗಿ ಅನೇಕ ಸರ್ಕಾರಿ ಆರೋಗ್ಯ ಯೋಜನೆಗಳಿದ್ದರೂ, ಎಲ್ಲರಿಗೂ ಹೇಳಿಕೊಳ್ಳುವಂತಹ ಉಚಿತ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ದುಬಾರಿಯಾಗಿದ್ದು, ಕೂಲಿಕಾರರಿಗೆ ಸೂಕ್ತ ಚಿಕಿತ್ಸೆ ಪಡೆಯುವುದು ದೊಡ್ಡ ಸವಾಲಾಗಿದೆ. ಆದರೆ ಇಲ್ಲೊಬ್ಬ ವೈದ್ಯರು (Doctor) ತಮ್ಮ ಕ್ಲಿನಿಕ್‌ನಲ್ಲಿ ಕೇವಲ 1 ರೂಪಾಯಿಗೆ ಚಿಕಿತ್ಸೆ ನೀಡಿ ಮೆಚ್ಚುಗೆ ಗಳಿಸಿದ್ದಾರೆ.
ಛತ್ತೀಸಗಢದ (Chhattisgarh) ರಾಯ್ಪುರದ (Raipur) ಅಂಬೇಡ್ಕರ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿನಯ್ ವರ್ಮಾ ಅವರು ತಮ್ಮ ಕ್ಲಿನಿಕ್‌ನಲ್ಲಿ ರೋಗಿಗಳಿಗೆ ಕೇವಲ 1 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದಾರೆ. 2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ತಲ್ಲಣಗೊಳಿಸಿತು. ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಹಾಸಿಗೆಗಳಿಗಾಗಿ ಹೆಣಗಾಡಿದರು. ಇಂತಹ ಸನ್ನಿವೇಶದಲ್ಲಿ ಡಾ. ವರ್ಮಾ ಅವರು ರೋಗಿಗಳಿಗೆ ಸಾಕಷ್ಟು ನೆರವಾಗಿದ್ದರು. ಇದನ್ನೂ ಓದಿ: ಮಗಳ ಬಳಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಪತ್ತೆ – ಆ್ಯಸಿಡ್ ಸುರಿದು ತಂದೆ, ತಾಯಿಯಿಂದ ಕೊಲೆ
Advertisement
Advertisement
ಕಳೆದ 4 ವರ್ಷಗಳಿಂದ ಬಡಜನರಿಗೆ 1 ರೂ. ಪಡೆದು ವರ್ಮಾ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ನಿತ್ಯ ಬೆಳಗ್ಗೆ 8 ರಿಂದ 10 ಗಂಟೆವರೆಗೆ ಡಾ. ವರ್ಮಾ ಅವರು ತಮ್ಮ ಮನೆಯಲ್ಲೇ ರೋಗಿಗಳಿಗೆ ವೈದ್ಯಕೀಯ ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಾರೆ. ನಂತರ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡುತ್ತಾರೆ. ಚಿಕಿತ್ಸೆಗಾಗಿ ಅವರು ಕೇವಲ 1 ರೂ. ಶುಲ್ಕ ವಿಧಿಸುತ್ತಾರೆ.
Advertisement
ಆಸ್ಪತ್ರೆಯಲ್ಲಿ ತುರ್ತು ಘಟಕದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಬಿಡುವಿದ್ದಾಗಲೆಲ್ಲಾ ಹೆಚ್ಚಿನ ಸಮಯ ಬಡರೋಗಿಗಳಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಫೆ.14 – ಹಸುಗಳನ್ನಪ್ಪಿಕೊಳ್ಳೊ ದಿನ ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಕರೆ
Advertisement
“ನನ್ನ ಬಳಿಗೆ ಬರುವ ಅನೇಕ ರೋಗಿಗಳಿಗೆ ಔಷಧಿಗಳನ್ನು ಖರೀದಿಸಲು ಸಹ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಅವರಿಗೆ ಔಷಧಿಗಳನ್ನು ನೀಡಲು ಪ್ರಯತ್ನಿಸುತ್ತೇನೆ” ಎಂದು ತಿಳಿಸಿದ್ದಾರೆ. ಪ್ರತಿದಿನ 30 ರಿಂದ 40 ರೋಗಿಗಳಿಗೆ ತಮ್ಮ ಸೇವೆಯನ್ನು ನೀಡುವ ಡಾ. ವಿನಯ್ ಅವರು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k