ಕಾಂಗ್ರೆಸ್ ನಾಯಕರಿಗೆ ಮತ್ತೊಮ್ಮೆ ಸವಾಲು ಹಾಕಿದ ಪ್ರಧಾನಿ ನರೇಂದ್ರ ಮೋದಿ

Public TV
1 Min Read
modi congress logo

– ಎಐಸಿಸಿ ಸ್ಥಾನಕ್ಕೆ ನೆಹರು ಕುಟುಂಬ ಹೊರತಾದ ನಾಯಕರು ಬರಲಿ

ರಾಯ್‍ಪುರ್: ಕಾಂಗ್ರೆಸ್ ನಾಯಕರು ನೆಹರು ಮನೆತನದ ಸದಸ್ಯರನ್ನು ಬಿಟ್ಟು ಬೇರೆಯವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸವಾಲು ಎಸೆದಿದ್ದಾರೆ.

ಛತ್ತೀಸ್‍ಗಢ ವಿಧಾನಸಭೆಯ ಎರಡನೇ ಹಂತದ ಚುನಾವಣೆ ಪ್ರಚಾರದ ವೇಳೆ ಮಹಾಸಮುಂದ್‍ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಿಮೋಟ್ ಕಂಟ್ರೋಲ್ ಸರ್ಕಾರವಾಗಿತ್ತು. ಆಗ ಛತ್ತೀಸ್‍ಗಢ ಅಭಿವೃದ್ಧಿ ಹಾಗೂ ಜನರ ಬೇಡಿಕೆಗಳ ಕುರಿತು ಅವರು ಗಮನ ಹರಿಸಲಿಲ್ಲ ಎಂದು ದೂರಿದರು.

ಕಾಂಗ್ರೆಸ್ ಕೇವಲ ಒಂದು ಕುಟುಂಬದ ಬಗ್ಗೆ ಮಾತ್ರ ಕಾಳಜಿ ಹೊಂದಿದೆ. ಅವರ ಅಧೀನದಲ್ಲಿಯೇ ಆಡಳಿತ ನಡೆಯುತ್ತಿದೆ. ಹೀಗಿರುವಾಗ ಪಕ್ಷದ ನಾಯಕರು ಜನರ ಪ್ರಗತಿ ಹಾಗೂ ಒಳಿತಿಗೆ ಶ್ರಮಿಸುತ್ತಾರೆ ಹೇಗೆ ಸಾಧ್ಯವೆಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಮುಖಂಡ ಹಾಗೂ ದಲಿತ ನಾಯಕ ಸೀತಾರಾಮ್ ಕೇಸರಿ ಎಐಸಿಸಿ ಅಧ್ಯಕ್ಷರಾಗಿದ್ದರು. ಆದರೆ ನೆಹರು ಕುಟುಂಬವು ಅವರನ್ನು ಐದು ವರ್ಷ ಅಧಿಕಾರದಲ್ಲಿ ಇರಲು ಬಿಡಲಿಲ್ಲ ಎಂದು ಹೇಳಿ ಟಾಂಗ್ ಕೊಟ್ಟರು.

ನೆಹರು ಮನೆತನವು ನಾಲ್ಕು ತಲೆಮಾರಿನಿಂದ ದೇಶವನ್ನು ಆಳುತ್ತಾ ಬಂದಿದೆ. ಆದರೆ ಅವರು ಜನರಿಗೆ ಯಾವುದೇ ಕೊಡುಗೆ ನೀಡಲಿಲ್ಲ. ನಾವು ಪ್ರತಿ ದಿನದ ವ್ಯವಹಾರವನ್ನು ಜನರ ಮುಂದೆ ತೆರೆದು ಇಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದರು.

ನಕ್ಸಲಿಸಂ ವಿರುದ್ಧ ಹೋರಾಡಲು ಡಾ. ರಮಣ್ ಸಿಂಗ್ ಅವರು ನೆರವು ನೀಡುವಂತೆ ಅಂದಿನ ಯುಪಿಎ ಸರ್ಕಾರವನ್ನು ಕೇಳಿಕೊಂಡಿದ್ದರು. ಆದರೆ ಇದನ್ನು ಕಾಂಗ್ರೆಸ್ ನಿರಾಕರಿಸಿ ಛತ್ತೀಸ್‍ಗಢ ಕೂಡ ದೇಶದ ಒಂದು ಭಾಗ ಎನ್ನುವುದನ್ನು ಮರೆಯಿತು ಎಂದು ಆರೋಪಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *