ರಾಯ್ಪುರ: ಅಪಘಾತದಲ್ಲಿ ಪುತ್ರನ ಸಾವಿನ ನೋವಿನಲ್ಲಿದ್ದ ದಂಪತಿ ಇಬ್ಬರೂ ಮರಣಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಛತ್ತೀಸ್‌ಗಢದಲ್ಲಿ (Chhattisgarh) ನಡೆದಿದೆ.
ಕೃಷ್ಣ ಪಟೇಲ್ ಮತ್ತು ಅವರ ಪತ್ನಿ ರಮಾ ಬಾಯಿ ಇಬ್ಬರೂ ತಮ್ಮ ಮನೆಯ ಅಂಗಳದಲ್ಲಿದ್ದ ಬೇವಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿ ನಾಲ್ಕು ಪುಟಗಳ ಡೆತ್‌ನೋಟ್ ಮತ್ತು ವೀಡಿಯೊ ಸಂದೇಶವನ್ನು ಮಾಡಿಟ್ಟು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಇರಾನ್‌ಗೆ ಸಂಬಂಧಿಸಿದ 3 ಅಮೆರಿಕ ನಿಷೇಧಿತ ಟ್ಯಾಂಕರ್ ವಶಕ್ಕೆ ಪಡೆದ ಭಾರತ
ದಂಪತಿಯ ಏಕೈಕ ಪುತ್ರ 21 ವರ್ಷದ ಆದಿತ್ಯ ಪಟೇಲ್ 2024 ರಲ್ಲಿ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ವೃತ್ತಿಯಲ್ಲಿ ಮೇಸ್ತ್ರಿ ಕೃಷ್ಣ (48) ಮತ್ತು ಗೃಹಿಣಿ ರಮಾ ಬಾಯಿ (47) ಅವರಿಗೆ ಆದಿತ್ಯನೇ ಪ್ರಪಂಚವಾಗಿದ್ದ.
ಅಪಘಾತದಲ್ಲಿ ಮಗ ಮೃತಪಟ್ಟಿದ್ದರಿಂದ ತಂದೆ-ತಾಯಿ ಇಬ್ಬರೂ ಮನನೊಂದಿದ್ದರು. ಆದಿತ್ಯ ದೇವಸ್ಥಾನದ ಕೆಲಸ ಮತ್ತು ಯಜ್ಞಕ್ಕೆ ಸಹಾಯ ಮಾಡಲು ಗ್ರಾಮದ ಪುರೋಹಿತರೊಂದಿಗೆ ಹೊರಗೆ ಹೋಗಿದ್ದ. ಪುತ್ರ ಮೊದಲು ಹೋಗಲು ಹಿಂಜರಿದಿದ್ದ. ಆದರೆ, ಆತನ ತಂದೆ, ‘ಇದು ದೇವರ ಕೆಲಸ.. ಹೋಗಿ ಬಾ’ ಎಂದು ಒತ್ತಾಯಿಸಿದ್ದರು. ಈ ವಿಚಾರವನ್ನು ನೆನೆದು, ನಾನು ತಪ್ಪು ಮಾಡಿದೆ ಅಂತ ತಂದೆ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ರೋಹಿತ್ ಶೆಟ್ಟಿ ಮನೆ ಮೇಲೆ ಫೈರಿಂಗ್ – ಮತ್ತೆ ಆರು ಜನ ಅರೆಸ್ಟ್, ಈವರೆಗೂ ಒಟ್ಟು 11 ಮಂದಿ ಬಂಧನ

