ರಾಯ್‍ಪುರ: ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿಯನ್ನು ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
Advertisement
ಛತ್ತೀಸ್‍ಗಢದ ರಾಜಧಾನಿ ರಾಯ್‍ಪುರದ ಕಯಾಬಂಧದ ಟ್ರಾಫಿಕ್ ಕಾನ್‍ಸ್ಟೇಬಲ್ ನಿಲಂಬರ್ ಸಿನ್ಹಾ ಅವರಿಗೆ ಶನಿವಾರ ಬೆಳಗ್ಗೆ ಮಾನಾ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬ್ಯಾಗ್‍ವೊಂದು ಕಂಡುಬಂದಿದೆ. ನಂತರ ಬ್ಯಾಗ್ ಜೀಪ್ ತೆಗೆದು ಪರಿಶೀಲನೆ ನಡೆಸಿದಾಗ 2000 ಮತ್ತು 500 ರೂಪಾಯಿ ನೋಟುಗಳಿರುವ 45 ಲಕ್ಷ ರೂಪಾಯಿ ಪತ್ತೆಯಾಗಿದೆ.
Advertisement
रायपुर पुलिस में यातायात आरक्षक नीलाम्बर सिन्हा को ड्यूटी के दौरान रोड में 45,00,000 रुपये के नोट मिले जिसे उन्होंने थाने में जमा कर दिया. pic.twitter.com/YSitLNvLUc
— Awanish Sharan (@AwanishSharan) July 23, 2022
Advertisement
ಬಳಿಕ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಿಲಂಬರ್ ಸಿನ್ಹಾ ಅವರು, ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಬ್ಯಾಂಕ್ ತೆಗೆದುಕೊಂಡು ಬಂದು ಹಣವನ್ನು ಹಿಂದಿರುಗಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಖನಂದನ್ ರಾಥೋರ್ ಹೇಳಿದ್ದಾರೆ. ಇದನ್ನೂ ಓದಿ: ಯೂತ್ ಕೈ ಕಾರ್ಯಕರ್ತರ ನಡುವೆ ಮಾರಾಮಾರಿ- ರಾಜೀನಾಮೆಗೆ ಮುಂದಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
Advertisement
ಟ್ರಾಫಿಕ್ ಕಾನ್‍ಸ್ಟೇಬಲ್ ಸಿನ್ಹಾ ಅವರ ಪ್ರಮಾಣಿಕತೆಗೆ ಮೆಚ್ಚಿ ಹಿರಿಯ ಅಧಿಕಾರಿಗಳು ಬಹುಮಾನ ಘೋಷಿಸಿದ್ದು, ಹಣ ಕಳೆದುಕೊಂಡವರಿಗಾಗಿ ಸಿವಿಲ್ ಲೈನ್ಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ, ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ: ಆರ್‌ಜಿವಿ