ರಾಯಪುರ್: ಪುಲ್ವಾಮಾ ದಾಳಿಯ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಸೈಬರ್ ವಾರ್ ತೀವ್ರಗೊಳ್ಳುತ್ತಿದ್ದು, ಪಾಕಿಸ್ತಾನದ ಹ್ಯಾಕರ್ ಗಳು ಛತ್ತೀಸಗಢ್ ಬಿಜೆಪಿ ರಾಜ್ಯ ಘಟಕದ ವೆಬ್‍ಸೈಟ್ ಅನ್ನು ಹ್ಯಾಕ್ ಮಾಡಿದ್ದಾರೆ.
ನಾವು ಪಾಕಿಸ್ತಾನದ ಸೈಬರ್ ಅಟ್ಯಾಕರ್ ಎಂದು ವೆಬ್‍ಸೈಟ್‍ಗೆ ಮೆಸೇಜ್ ಕಳುಹಿಸಿದ್ದಾರೆ. ಸರಣಿ ಸ್ಫೋಟದ ದಾಳಿಯ ಬೆದರಿಕೆ ಒಡ್ಡಿದ್ದು, ಪಾಕಿಸ್ತಾನದ ಧ್ವಜ ಹಾಗೂ ಅವರ ಆರ್ಮಿ ಫೋಟೋಗಳನ್ನು ವೆಬ್‍ಸೈಟ್‍ನಲ್ಲಿ ಹಾಕಲಾಗಿದೆ. ಕಾಶ್ಮೀರದ ಮೇಲೆ ಹಿಡಿತವನ್ನು ಸಾಧಿಸುವ ಯೋಚನೆ ಮಾಡಬೇಡಿ ಎನ್ನುವ ಮೆಸೇಜ್ ಪೋಸ್ಟ್ ಮಾಡಿದ್ದಾರೆ.
Advertisement
Chhattisgarh: BJP state website hacked by Pakistani hackers. D Mashke, state BJP IT cell head says, "More than 100 websites were hacked in a cyber-attack, our website was one of them. We've registered a complaint. They can't take us head on, that's why they resort to such things" pic.twitter.com/hb7J1xSzOI
— ANI (@ANI) February 21, 2019
Advertisement
ನಮ್ಮ ವೆಬ್‍ಸೈಟ್ ಸೇರಿದಂತೆ 100ಕ್ಕೂ ಹೆಚ್ಚು ವೆಬ್‍ಸೈಟ್ ಗಳನ್ನು ಪಾಕಿಸ್ತಾನ ಮೂಲದವನು ಎನ್ನಲಾದ ವ್ಯಕ್ತಿಗಳು ಹ್ಯಾಕ್ ಮಾಡಿದ್ದಾರೆ. ಈ ಸಂಬಂಧ ಸೈಬರ್ ಪೊಲೀಸರಿಗೆ ದೂರು ನೀಡಿದ್ದೇವೆ. ನಮ್ಮನ್ನು ನೇರವಾಗಿ ಎದುರಿಸಲು ಸಾಧ್ಯವಾಗದೇ ಈ ರೀತಿ ಮಾಡುತ್ತಿದ್ದಾರೆ ಎಂದು ಛತ್ತೀಸಗಢ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಡಿ.ಮಶಾಕೆ ದೂರಿದ್ದಾರೆ.
Advertisement
ಭಾರತದ ವೆಬ್‍ಸೈಟ್‍ಗಳನ್ನು ವಿದೇಶಿಯರು ಹ್ಯಾಕ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಗೋವಾ ಬಿಜೆಪಿಯ ವೆಬ್‍ಸೈಟ್ ಅನ್ನು ಅನಾಮಿಕ ವ್ಯಕ್ತಿಯೊಬ್ಬ ಹ್ಯಾಕ್ ಮಾಡಿ, ಪಾಕಿಸ್ತಾನ್ ಜಿಂದಾಬಾದ್ ಎಂದು ಹಾಕಿದ್ದ.
Advertisement
ವೆಬ್‍ಸೈಟ್ ಹ್ಯಾಕ್ ಆದ ಬಳಿಕ ಟೀಂ ಪಾಕ್ ಸೈಬರ್ ಎಕ್ಸಪರ್ಟ್ ಹಾಗೂ ಮೊಹಮ್ಮದ್ ಬಿಲಾಲ್ ಎಂಬ ವ್ಯಕ್ತಿಯ ಹೆಸರನ್ನು ವೆಬ್ ಪೇಜ್‍ನಲ್ಲಿ ಉಲ್ಲೇಖಿಸಲಾಗಿತ್ತು. ಮೊಹಮ್ಮದ್ ಬಿಲಾಲ್ ಪಾಕಿಸ್ತಾನ ಮೂಲದ ಟೀಂ ಪಾಕ್ ಸೈಬರ್ ಎಕ್ಸಪರ್ಟ್ ತಂಡದ ಸದಸ್ಯ ಎನ್ನುವುದು ತನಿಖೆಯ ವೇಳೆ ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ ಈ ತಂಡವು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರ ವೆಬ್‍ಸೈಟ್ ಅನ್ನು ಹ್ಯಾಕ್ ಮಾಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv