– ಪಟಾಕಿ ಸಿಡಿಸಿ ಗ್ರಾಮಸ್ಥರ ಸಂಭ್ರಮಾಚರಣೆ
ರಾಯ್ಪುರ: ಛತ್ತೀಸ್‌ಗಢದಲ್ಲಿ(Chhattisgarh) ಹೊಸದಾಗಿ ರಚನೆಯಾದ ಮೊಹ್ಲಾ ಮನ್‌ಪುರ ಅಂಬಾಘರ್ ಚೌಕಿ(Mohla Manpur Ambagarh Chowki) ಜಿಲ್ಲೆಯ 17 ನಕ್ಸಲ್ ಪೀಡಿತ ಗ್ರಾಮಗಳಿಗೆ ಇದೇ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ದೊರೆತಿದೆ.
ಮೊಹ್ಲಾ ಮನ್ಪುರ್ ಅಂಬಾಗಢ ಚೌಕಿ ಜಿಲ್ಲೆ ಈ 17 ಗ್ರಾಮಗಳು ನಕ್ಸಲ್ ಪೀಡಿತ ದಟ್ಟ ಕಾಡುಗಳ ನಡುವೆ ಇವೆ. ಮುಖ್ಯಮಂತ್ರಿ ಮಜರತೋಲಾ ವಿದ್ಯುದ್ದೀಕರಣ ಯೋಜನೆಯಡಿಯಲ್ಲಿ 3 ಕೋಟಿ ರೂ.ಗಳ ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಮೂಲಕ ವಿದ್ಯುತ್ ಒದಗಿಸಲಾಗಿದೆ. ಈ ಯೋಜನೆಯು ಗ್ರಾಮಸ್ಥರ ಜೀವನದಲ್ಲಿ ಭರವಸೆ ಮತ್ತು ಬೆಳಕನ್ನು ತಂದಿದೆ. ಇದನ್ನೂ ಓದಿ: ಬಿಎಸ್‌ಎಫ್ ಯೋಧನಿಗೆ 20 ದಿನವೂ ಇನ್ನಿಲ್ಲದ ಟಾರ್ಚರ್ ನೀಡಿದ್ದ ಪಾಕ್
ಮೊಹ್ಲಾ ಮನ್ಪುರ್ ಅಂಬಾಗಢ ಚೌಕಿಯ ಕತುಲ್‌ಜೋರಾ, ಕಟ್ಟಪರ್, ಬೋದ್ರಾ, ಬುಕ್ಮಾರ್ಕಾ, ಸಂಬಲ್ಪುರ್, ಗಟ್ಟೆಗಹನ್, ಪುಗಡಾ, ಅಮಕೊಡೊ, ಪಟೇಮೆಟಾ, ಟಟೆಕಾಸಾ, ಕುಂಡಲ್ಕಲ್, ರೈಮನ್ಹೋರಾ, ನೈಂಗುಡ, ಮೆಟಾಟೋಡ್ಕೆ, ಕೊಹ್ಕಟೋಳ, ಅಡ್ಸಮೇಟಾ ಮತ್ತು ಕುಂಜ್ಕನ್ಹಾರ್ ಎಂಬ 17 ಹಳ್ಳಿಗಳಿಗೆ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದನ್ನೂ ಓದಿ: ವಿಪಕ್ಷದವರು ಕ್ವಾರ್ಟರ್ ಅಲ್ಲ, ಫುಲ್ ಬಾಟಲ್ ಆದ್ರೂ ಹೇಳಲಿ ನಾವು ತಲೆ ಕೆಡಿಸಿಕೊಳ್ಳಲ್ಲ: ಡಿಕೆಶಿ
ದಟ್ಟವಾದ ಕಾಡು ಪ್ರದೇಶ, ನಕ್ಸಲರ ಬೆದರಿಕೆ ನಡುವೆ ಈ ಹಳ್ಳಿಗಳನ್ನು ತಲುಪುವುದು ಕಷ್ಟವಾಗಿತ್ತು. ಹೀಗಿದ್ದರೂ ಗ್ರಿಡ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿಲಾಗಿದೆ ಎಂದು ವಿದ್ಯುತ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲಿ ದೇಶದ ರಕ್ಷಣಾ ಕ್ಷೇತ್ರ ಬಲಪಡಿಸಿಲ್ಲ: ಶೋಭಾ ಕರಂದ್ಲಾಜೆ
ಈ ಹಳ್ಳಿಗಳಲ್ಲಿ ಸೋಲಾರ್ ಸಂಪರ್ಕ ಇದ್ರೂ ನಿರ್ವಹಣೆ ಸಮಸ್ಯೆ ಎದುರಾಗಿತ್ತು. ಹೀಗಾಗಿಯೇ ಅಲ್ಲಿನ ಜನ ಸೀಮೆಎಣ್ಣೆ ದೀಪಗಳ ಮೊರೆ ಹೋಗಿದ್ದರು. ವಿದ್ಯುತ್ ಸಂಪರ್ಕ ದೊರೆತ ಹಿನ್ನೆಲೆ ದಶಕಗಳ ಕನಸು ಈಡೇರಿದ ಖುಷಿಯಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.