ಇಂದೋರ್: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದ ಟೀಂ ಇಂಡಿಯಾ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಟಿ20 ಮಾದರಿಯಲ್ಲಿ ಮೊದಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಟಿ20 ಪಂದ್ಯದಲ್ಲಿ ಶತಕ ದಾಖಲಿಸಿದ ಮೊದಲ ಸೌರಾಷ್ಟ್ರ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸೌರಾಷ್ಟ್ರ ಪರ ಆಡುತ್ತಿರುವ ಪೂಜಾರ ಕೇವಲ 61 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. 31 ವರ್ಷದ ಪೂಜಾರ ಟೆಸ್ಟ್ ಕ್ರಿಕೆಟ್ ಸ್ಟಾರ್ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದು, ರೈಲ್ವೇಸ್ ತಂಡದ ವಿರುದ್ಧ 16 ಬೌಂಡರಿ, 1 ಸಿಕ್ಸರ್ ನೆರವಿನಿಂದ ಶತಕ ಸಿಡಿಸಿದ್ದಾರೆ. 29 ಎಸೆತಗಳಲ್ಲೇ ಅರ್ಧ ಶತಕ ಗಳಿಸಿದರೆ, ಬಳಿಕ 32 ಎಸೆತದಲ್ಲಿ 50 ರನ್ ಅರಿದು ಬಂದಿತ್ತು.
Advertisement
Cheteshwar Pujara smashed a 61 balls Century in Syed Mushtaq ali trophy..
First 50 – 29 Balls
Next 50 – 32 Balls
Pujara version 2.0 ????
— Broken Cricket (@BrokenCricket) February 21, 2019
Advertisement
ಪಂದ್ಯದಲ್ಲಿ ರಾಬಿನ್ ಉತ್ತಪ್ಪ 31 ಎಸೆತಗಳಲ್ಲಿ 46 ರನ್ ಗಳಿಸಿ ಪೂಜಾರ ಅವರಿಗೆ ಸಾಥ್ ನೀಡಿದರು. ಆದರೆ ಅರ್ಧ ಶತಕದ ಸನಿಹದಲ್ಲಿ ಅಮಿತ್ ಮಿಶ್ರಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. 20 ಓವರ್ ಗಳ ಅಂತ್ಯಕ್ಕೆ ಸೌರಾಷ್ಟ್ರ 3 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತು. ಆಶೀಶ್ ಯಾದವ್ ರೈಲ್ವೇಸ್ ತಂಡದ ಪರ 4 ಓವರ್ ಗಳಲ್ಲಿ 30 ರನ್ ನೀಡಿ 1 ವಿಕೆಟ್ ಪಡೆಯುವ ಮೂಲಕ ಪರಿಣಾಮಕಾರಿ ಬೌಲರ್ ಎನಿಸಿಕೊಂಡರು. ಗೆಲ್ಲಲು 189 ರನ್ ಗುರಿ ಬೆನ್ನತ್ತಿದ ರೈಲ್ವೇಸ್ ತಂಡ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿ ಜಯ ಪಡೆಯಿತು.
Advertisement
ಪೂಜಾರ ಟಿ20 ಮಾದರಿಯಲ್ಲಿ 58 ಪಂದ್ಯಗಳನ್ನು ಆಡಿದ್ದು, 1,096 ರನ್ ಸಿಡಿಸಿದ್ದಾರೆ. ಈ ಹಿಂದೆ 2016 ರಲ್ಲಿ ಜಮ್ಮು ಕಾಶ್ಮೀರ ತಂಡದ ವಿರುದ್ಧ ಪೂಜಾರ 81 ರನ್ ಗಳಿಸಿದ್ದು ಅವರ ಅಧಿಕ ಮೊತ್ತ ಆಗಿತ್ತು. 2014 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಐಪಿಎಲ್ ನಲ್ಲಿ ಆಡಿದ್ದ ಪೂಜಾರ ಬಳಿಕ ಐಪಿಎಲ್‍ನಲ್ಲಿ ಭಾಗವಹಿಸಿರಲಿಲ್ಲ. ವಿಶ್ವಕಪ್ ಬಳಿಕ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಪೂಜಾರ ಭಾಗವಹಿಸಲಿದ್ದಾರೆ.
Advertisement
Cheteshwar Pujara becomes the first player to score a Twenty20 century for Saurashtra.
He remained unbeaten on 100 off 61 balls with 14 fours and a six against Railways today. #MushtaqAliT20 #RLWvSAU
— Sampath Bandarupalli (@SampathStats) February 21, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv