ರಾಜ್‍ಕೋಟ್ : ಭಾರತದ ಟೆಸ್ಟ್ ತಂಡದ ಆಟಗಾರ ಚೇತೇಶ್ವರ್ ಪೂಜಾರ ಭರ್ಜರಿ ದ್ವಿಶತಕದಿಂದಾಗಿ ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಸೌರಾಷ್ಟ್ರ ಬೃಹತ್ ಮೊತ್ತ ಕಲೆಹಾಕಿದೆ. ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿರುವ ಸೌರಾಷ್ಟ್ರ ಗೆಲುವಿನ ಕಡೆ ಮುಖ ಮಾಡಿದೆ. ಸೌರಾಷ್ಟ್ರದ ಬೃಹತ್ ಮೊತ್ತ ಬೆನ್ನತ್ತಿರುವ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿದೆ.
ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನದ ಅಂತ್ಯಕ್ಕೆ 162 ರನ್ ಗಳಿಸಿದ್ದ ಪೂಜಾರ ಎರಡನೇ ದಿನ ಕೂಡಾ ಭರ್ಜರಿ ಬ್ಯಾಟಿಂಗ್ ನಡೆಸಿದ್ರು. ಕರ್ನಾಟಕ ತಂಡದ ಬೌಲರ್ ಗಳಿಗೆ ಬೆವರಿಳಿಸಿ ದ್ವಿಶತಕ (248) ಬಾರಿಸಿದ್ರು. ಪೂಜಾರಿಗೆ ಸಾಥ್ ನೀಡಿದ್ದ ಶೆಲ್ಡನ್ ಜಾಕ್ಸನ್ ಕೂಡಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿ ಶತಕ(161) ಸಿಡಿಸಿದ್ರು. ಇಬ್ಬರು ಆಟಗಾರರ ಪ್ರದರ್ಶನದಿಂದ ಸೌರಾಷ್ಟ್ರ ಮೊದಲ ಇನ್ನಿಂಗ್ಸ್ ನ್ನ 581 ಗೆ ಡಿಕ್ಲೈರ್ ಮಾಡಿಕೊಳ್ತು. ಭಾರತದ ಪರ ಪ್ರವೀಣ್, ಪವನ್, ಸುಚೀತ್ ತಲಾ ಎರಡು ವಿಕೆಟ್ ಪಡೆದ್ರು.
Advertisement
ಮೊಲದ ಇನ್ನಿಂಗ್ಸ್ ಪ್ರಾರಂಭ ಮಾಡಿರುವ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿದೆ. ಇನ್ನಿಂಗ್ಸ್ ನ ಮೊದಲ ಎಸೆತದಲ್ಲೆ ದೇವದತ್ ಔಟಾದ್ರು. ಎರಡನೇ ದಿನದ ಅಂತ್ಯಕ್ಕೆ ಕರ್ನಾಟಕ ಒಂದು ವಿಕೆಟ್ ಕಳೆದುಕೊಂಡು 13 ರನ್ ಗಳಿಸಿದೆ. ಆರ್. ಸಮರ್ಥ ಮತ್ತು ರೋಹನ್ ಕದಂ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Advertisement
ಸ್ಕೋರ್:
ಸೌರಾಷ್ಟ್ರ ಮೊದಲ ಇನ್ನಿಂಗ್ಸ್ 581/7
ಪೂಜಾರ-248
ಜಾಕ್ಸನ್ – 161
Advertisement
ಪ್ರವೀಣ್ – 80-2
ಸುಚೀತ್ – 129-2
Advertisement
ಕರ್ನಾಟಕ ಮೊದಲ ಇನ್ನಿಂಗ್ಸ್ – 13/1
ಆರ್.ಸಮರ್ಥ -6*
ರೋಹನ್ ಕದಂ – 7*