ಮುಂಬೈ: ಟೀಂ ಇಂಡಿಯಾದ (Team India) ಕ್ರಿಕೆಟರ್ ಚೇತೇಶ್ವರ ಪೂಜಾರಗೆ (Cheteshwar Pujara) 2017ರಲ್ಲಿ ಅರ್ಜುನ ಪ್ರಶಸ್ತಿ (Arjuna Award) ಸಿಕ್ಕಿತ್ತು. ಆ ಪ್ರಶಸ್ತಿ 5 ವರ್ಷಗಳ ಬಳಿಕ ಇದೀಗ ಪೂಜಾರ ಕೈ ಸೇರಿದೆ.
Advertisement
2017ರಲ್ಲಿ ಪೂಜಾರ ಅರ್ಜುನ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಹೋಗಿರಲಿಲ್ಲ. ಆ ಬಳಿಕ ಇದೀಗ 5 ವರ್ಷಗಳ ಬಳಿಕ ಅರ್ಜುನ ಪ್ರಶಸ್ತಿಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ರಿಂದ ಪೂಜಾರ ಸ್ವೀಕರಿಸಿದ್ದಾರೆ. ಇದನ್ನೂ ಓದಿ: 11 ಬೌಂಡರಿ, 7 ಸಿಕ್ಸ್ – ಶತಕ ಸಿಡಿಸಿದ ದಾಖಲೆವೀರ ಸೂರ್ಯ
Advertisement
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಪೂಜಾರ, ನಾನು 2017ರಲ್ಲಿ ಅರ್ಜುನ ಪ್ರಶಸ್ತಿ ಬಂದಾಗ ಸ್ವೀಕರಿಸಿರಲಿಲ್ಲ. ಕ್ರಿಕೆಟ್ ನಡುವೆ ಬಿಡುವಿಲ್ಲದ ಕಾರಣ ಹಾಗೆ ಉಳಿದುಕೊಂಡಿತ್ತು. ಇದೀಗ ಕೇಂದ್ರ ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್‌ರಿಂದ ಪ್ರಶಸ್ತಿ ಪಡೆದುಕೊಂಡಿದ್ದೇನೆ. ಬಿಸಿಸಿಐ (BCCI) ಮತ್ತು ಸಚಿವರಿಗೆ ಧನ್ಯವಾದ ಎಂದಿದ್ದಾರೆ. ಇದನ್ನೂ ಓದಿ: ಕಾಲ್ಚೆಂಡು ಹಬ್ಬ ಬಲು ದುಬಾರಿ – ಫಿಫಾ ಟಿಕೆಟ್ ದರ ಕೇಳಿದ್ರೆ ದಂಗಾಗ್ತಿರಿ!
Advertisement
Thankful to @IndiaSports, @BCCI and @ianuragthakur to organise and handover the Arjuna Award belatedly, which I could not collect the year it was awarded to me due to my cricket commitments. Honoured and grateful???? pic.twitter.com/Dokz4ZP3Hs
— Cheteshwar Pujara (@cheteshwar1) November 19, 2022
ಪೂಜಾರ ಸದ್ಯ ಸೌರಾಷ್ಟ್ರ ಪರ ವಿಜಯ್ ಹಜಾರೆ ದೇಸಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ ಆಡಲು ಭಾರತ-ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Live Tv
[brid partner=56869869 player=32851 video=960834 autoplay=true]