ಶಾರುಖ್ ಖಾನ್ ನಟನೆಯ ‘ಪಠಾಣ್’ (Pathan) ಸಿನಿಮಾದ ಹಾಡೊಂದರಲ್ಲಿ ಕೇಸರಿ (Saffron) ಬಣ್ಣದ ಬಿಕಿನಿ (Bikini) ಧರಿಸಲಾಗಿದೆ ಎನ್ನುವ ಕಾರಣಕ್ಕಾಗಿ ಹಿಂದೂಪರ ಸಂಘಟನೆಗಳು ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಪಟ್ಟು ಹಿಡಿದಿದ್ದವು. ಅಲ್ಲದೇ ಈ ಹಾಡಿನಲ್ಲಿ ಕೇಸರಿ ಬಣ್ಣಕ್ಕೂ ಅಪಮಾನ ಮಾಡಲಾಗಿದೆ ಎಂದು ಆರೋಪ ಮಾಡಿದ್ದವು. ದೇಶದ ನಾನಾ ಭಾಗಗಳಲ್ಲಿ ಈ ಸಿನಿಮಾ ಕುರಿತು ವಿರೋಧ ವ್ಯಕ್ತವಾಗಿತ್ತು. ಹಿಂದೂಪರ ಸಂಘಟನೆಗಳು ಮಾತ್ರವಲ್ಲ, ರಾಜಕೀಯ ಮುಖಂಡರು ಮತ್ತು ಕಲಾವಿದರು ಕೂಡ ಈ ಕುರಿತು ತಮ್ಮ ಪ್ರತಿಕ್ರಿಯೆ ದಾಖಲಿಸಿದ್ದವು.
ಇದೀಗ ಕನ್ನಡದ ನಟ, ಹೋರಾಟಗಾರ ಚೇತನ್ (Chetan) ಕೂಡ ಈ ವಿವಾದದ (Controversy) ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯಾವ ಬಣ್ಣವೂ ಯಾವುದರ ಸಂಕೇತ ಆಗಬಾರದು ಎಂದು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ‘ಕೇಸರಿ ಹಿಂದೂಗಳ ಸಂಕೇತವಲ್ಲ. ಹಿಂದೂಗಳ ಬಣ್ಣ ಆಗಬಾರದು. ಕೇಸರಿ ಬಣ್ಣ ತ್ಯಾಗದ ಸಂಕೇತ. ಅದು ಭಾರತದ ರಾಷ್ಟ್ರ ಧ್ವಜದಲ್ಲೂ ಇದೆ. ಹಸಿರು ಬಣ್ಣ ಕೂಡ ಅಷ್ಟೇ, ಅದು ಕೂಡ ಯಾರದೋ ಬಣ್ಣವಲ್ಲ. ಇದೊಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಷ್ಟೇ’ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಆದಿಲ್ ಖಾನ್ ಜೊತೆ ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ
ಪಠಾಣ್ ಸಿನಿಮಾದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದರು. ಆ ಹಾಡಿನ ಸಾಹಿತ್ಯದಲ್ಲೂ ಕೇಸರಿ ಬಣ್ಣಕ್ಕೆ ಅವಮಾನಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಕೂಡ ಹಾಡಿನಲ್ಲಿಯ ಕೆಲವು ಚಿತ್ರಿಕೆಗಳಿಗೆ ಕತ್ತರಿ ಹಾಕುವಂತೆ ಹೇಳಿತ್ತು. ಕೆಲವು ಕಡೆ ಈ ಸಿನಿಮಾವನ್ನು ರಿಲೀಸ್ ಮಾಡದಂತೆ ಥಿಯೇಟರ್ ಗೂ ಮುತ್ತಿಗೆ ಹಾಕಲಾಯಿತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k