ಕಮಲ್ ಹಾಸನ್ ಸಣ್ಣತನದ ಹೇಳಿಕೆ ನೀಡಿ, ಕನ್ನಡಿಗರಿಗೆ ಕ್ಷಮೆ ಕೇಳದೇ ಮೊಂಡುತನ: ಚೇತನ್

Public TV
1 Min Read
Chethan and Kamal hassan

ಹಾವೇರಿ: ಕಮಲ್ ಹಾಸನ್ ಸಣ್ಣತನದ ಹೇಳಿಕೆ ನೀಡಿದಲ್ಲದೇ, ಕನ್ನಡಿಗರಿಗೆ ಕ್ಷಮೆ ಕೇಳದೇ ಮೊಂಡುತನ ಪ್ರದರ್ಶಿಸುತ್ತಿದ್ದಾರೆ ಎಂದು ನಟ ಚೇತನ್ (Chetan) ಕಿಡಿಕಾರಿದರು.

ಹಾವೇರಿಯ ಪ್ರವಾಸಿ ಮಂದಿರದಲ್ಲಿ ನಟ ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ (Kamal Haasan) ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ತಮಿಳು, ಕನ್ನಡ (Kannada) ಎರಡೂ ಒಂದೇ ಮೂಲದ ಭಾಷೆಗಳು. ಇವು ದ್ರಾವಿಡ ವರ್ಗದಿಂದ ಬಂದ ಭಾಷೆಗಳಾಗಿವೆ. ಎರಡೂ ಕೂಡಾ ಸಹೋದರ ಭಾಷೆಗಳು. ಕಮಲ್ ಹಾಸನ್ ಅವೈಜ್ಞಾನಿಕ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ Vs ಡಿಸಿಎಂ ಮಧ್ಯೆ ವರ್ಗಾವಣೆ ಸಂರ್ಘರ್ಷ – ನಿಜಕ್ಕೂ ಆಗಿದ್ದೇನು? ಡಿಕೆಶಿ ಆಕ್ಷೇಪ ಏಕೆ?

ಕಮಲ್ ಹಾಸನ್ ಇಷ್ಟಾದ್ರೂ ಕನ್ನಡಿಗರ ಬಳಿ ಕ್ಷಮೆ ಕೇಳದೇ ಮೊಂಡುತನ ತೋರಿಸಿದ್ದಾರೆ. ಸಣ್ಣತನದ ಹೇಳಿಕೆ ನೀಡಿದ್ದಾರೆ. ಕ್ಷಮೆ ಕೇಳುವ ವಿನಯವೂ ಅವರಿಗೆ ಇಲ್ಲ. ಸುಳ್ಳಲ್ಲೇ ಮೆರೆಯೋಕೆ ನೋಡ್ತಿದಾರೆ. ಅವರು ವೈಚಾರಿಕೆ ನೆಲೆಗಟ್ಟಿನಲ್ಲಿ ಮಾತಾಡಬೇಕು. ಕಮಲ್ ಹಾಸನ್ ಹೇಳಿಕೆಯಲ್ಲಿ ದ್ರಾವಿಡ ಪರಿಕಲ್ಪನೆಯೂ ಅಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕಮಲ್ ಹಾಸನ್ `ಕನ್ನಡ’ ವಿವಾದ – ಸಾಕು ಸರ್ ಎಂದ ನ್ಯಾಚುರಲ್ ಸ್ಟಾರ್

ತಮಿಳಿನ ಇತಿಹಾಸ ಹಳೆಯದ್ದಿರಬಹುದು. ಆದರೆ ಕನ್ನಡ ತಮಿಳಿನಿಂದ ಬಂದಿದ್ದು ಅನ್ನೋದು ಸರಿಯಲ್ಲ. ಈ ವಿಚಾರ ಕನ್ನಡಿಗರಿಗೆ ಭಾವನಾತ್ಮಕವಾಗಿ ನೋವುಂಟು ಮಾಡಿದೆ. ಇದು ಒಳ್ಳೆ ನಡವಳಿಕೆ ಅಲ್ಲ. ಕಮಲ್ ಹಾಸನ್ ಲಿಂಗ್ಯುಸ್ಟಿಕ್ ಸೈನ್ಸ್ (Linguistic Science) ಓದಿಕೊಂಡಿಲ್ಲ. ಅಪ್ಡೇಟ್ ಕೂಡಾ ಆಗಿಲ್ಲ. ಹಾಗಾಗಿ ಮೊಂಡುತನ, ಸಣ್ಣತನ ತೋರಿಸಿದ್ದಾರೆ. ಅವರ ತಂದೆ ಪೆರಿಯಾರ್ ಹೋರಾಟ ನಮಗೆ ಮಾರ್ಗದರ್ಶನವಾಗಿದೆ. ಕನ್ನಡ ಹಾಗೂ ತಮಿಳು ಸಹೋದರ, ಸಹೋದರಿ ಭಾಷೆಗಳಾಗಿವೆ. ಕಮಲ್ ಹಾಸನ್ ಹೇಳಿಕೆ ಸುಳ್ಳು ಎಂದರು.

Share This Article