ರಾಯಚೂರು: ಅಪ್ಪುಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಅಪ್ಪು ಅವರ ಸಾಮಾಜಿಕ ಕಾಳಜಿ, ಒಳ್ಳೆಯತನ ದೊಡ್ಡದು ಎಂದು ನಟ ಚೇತನ್ ಹೇಳಿದ್ದಾರೆ.
Advertisement
ಮಾಧ್ಯಮದವರೊಂದಿಗೆ ಮಾತನಾಡಿದವರು, ಅಪ್ಪುಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಅಪ್ಪು ಅವರ ಸಾಮಾಜಿಕ ಕಾಳಜಿ, ಒಳ್ಳೆಯತನ ದೊಡ್ಡದು. ಪ್ರಶಸ್ತಿಯಿಂದ ಅಪ್ಪು ಅವರ ವಿಚಾರಗಳು ಹೆಚ್ಚು ಆಗಲ್ಲ , ಸಿಗದಿದ್ರೆ ಕಡಿಮೆಯೂ ಆಗಲ್ಲ ಪ್ರಶಸ್ತಿಗಿಂತ ಅಪ್ಪು ವ್ಯಕ್ತಿತ್ವವೇ ಮುಖ್ಯ. ಅಪ್ಪು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾವಾದದ್ದು ಎಂದಿದ್ದಾರೆ. ಇದನ್ನೂ ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ
Advertisement
Advertisement
ಅಪ್ಪು ಮತ್ತು ನಮ್ಮ ಸ್ನೇಹ 13 ವರ್ಷದ್ದು, ಒಟ್ಟಿಗೆ ಒಂದೇ ಕಡೆ ಜಿಮ್ ಮತ್ತು ಯೋಗ ಮಾಡುತ್ತಿದ್ದೇವು. 2012 ರ ಬಳಿಕ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. ಅಪ್ಪು ಸಾವಿನ ಬಳಿಕ ಕಣ್ಣು ದಾನ ಮಾಡಿ ನಾಲ್ಕು ಜನರ ಬದುಕಿಗೆ ಬೆಳಕಾಗಿದ್ದಾರೆ. ನಾವು ಕೂಡ ಅಪ್ಪು ಅವರ ಆದರ್ಶದಂತೆ ದೇಹ ಮತ್ತು ಅಂಗಾಂಗಗಳ ದಾನ ಮಾಡಬೇಕು ಅಂತ ನಟ, ಹೊರಾಟಗಾರ ಚೇತನ್ ಹೇಳಿದ್ದಾರೆ. ಇದನ್ನೂ ಓದಿ: ಹೆಚ್.ಆರ್ ರಂಗನಾಥ್ ಅವರಿಗೆ ನಾನು ಆಭಾರಿಯಾಗಿದ್ದೇನೆ: ಹರೇಕಳ ಹಾಜಬ್ಬ
Advertisement
ಸಿದ್ದರಾಮಯ್ಯ ತನ್ನ ಜಾತಿಗೆ ಹೆಚ್ಚು ಸೌಲಭ್ಯ ನೀಡಿದ್ದಾರೆ: ದೇವದಾಸಿ ಪದ್ದತಿ ನಿರ್ಮೂಲನೆ ಹಾಗೂ ಅಲೆಮಾರಿ ಜನಾಂಗಕ್ಕೆ ಸೂರು ಒದಗಿಸಲು ಹೋರಾಟ ನಡೆಸಿದ್ದೇವೆ. ಜನಪ್ರತಿನಿಧಿಗಳು ಬಣ್ಣದ ಮಾತನಾಡದೆ ಕೆಲಸ ಮಾಡಬೇಕು. ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮೂರು ಪಕ್ಷಗಳು ಬ್ರಾಹ್ಮಣ್ಯದ ಪರವಾಗೇ ಇವೆ. ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಅಲೆಮಾರಿಗಳನ್ನ ಕಡೆಗಣಿಸಲಾಗಿದೆ. ಸಿದ್ದರಾಮಯ್ಯ ತಾವು ಹುಟ್ಟಿದ ಜಾತಿಗೆ ಹೆಚ್ಚು ಸೌಲಭ್ಯ ಕೊಟ್ಟಿದ್ದಾರೆ, ದಲಿತರಿಗೆ ಹೆಚ್ಚು ಸೌಲಭ್ಯ ನೀಡಿಲ್ಲ. ಜನಪ್ರತಿನಿಧಿಗಳು ಬಣ್ಣಬಣ್ಣದ ಮಾತುಗಳನ್ನ ಹೇಳಿ ತಮ್ಮ ಮತಗಳಿಗೆ ಮಾತ್ರ ಬಡ ಜನರನ್ನ ಬಳಸಿಕೊಳ್ಳುತ್ತಿದ್ದಾರೆ ಅಂತ ಚೇತನ್ ಆರೋಪಿಸಿದ್ದಾರೆ.