Connect with us

Latest

ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ನಿಷೇಧ- ಹಿಂದೂ ಧಾರ್ಮಿಕ ಆಚರಣೆ ಮೇಲೆ ಮಾತ್ರ ನಿಷೇಧ ಏಕೆ: ಚೇತನ್ ಭಗತ್ ಪ್ರಶ್ನೆ

Published

on

ನವದೆಹಲಿ: ದೀಪಾಳಿಗೆ ಪಟಾಕಿ ನೀಷೆಧಿಸುವುದು ಕ್ರಿಸ್‍ಮಸ್ ಹಬ್ಬಕ್ಕೆ ಕ್ರಿಸ್‍ಮಸ್ ಟ್ರೀ ನಿಷೇಧ ಮಾಡಿದ ಹಾಗೆ ಎಂದು ಲೇಖಕ ಚೇತನ್ ಭಗತ್ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನವೆಂಬರ್ 1 ರವರೆಗೆ ಪಟಾಕಿಗಳನ್ನು ಮಾರಾಟವನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿರೋ ಹಿನ್ನೆಲೆಯಲ್ಲಿ ಲೇಖಕ ಚೇತನ್ ಭಗತ್ ಟ್ವೀಟ್ ಮಾಡಿದ್ದು, ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ ಮಾತ್ರ ಏಕೆ ಈ ನಿಷೇಧ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ತೀರ್ಪಿನ ಕುರಿತು ಬಾಲಿವುಡ್ ಹಾಗೂ ಕ್ರಿಕೆಟ್‍ನ ಹಲವು ತಾರೆಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಲೇಖಕ ಚೇತನ್ ಭಗತ್ ಅವರು ಈ ಕುರಿತು ಟ್ವಿಟ್ಟರ್‍ನಲ್ಲಿ ಸರಣಿ ಟ್ವೀಟ್‍ಗಳನ್ನು ಮಾಡಿದ್ದಾರೆ. ಸುಪ್ರೀಂ ಕೋರ್ಟ್ ದೀಪಾಳಿ ಸಂದರ್ಭದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿದ್ದು ಯಾಕೆ? ಇದು ಸಂಪೂರ್ಣ ನಿಷೇಧವೇ? ಪಟಾಕಿ ಇಲ್ಲದ ದೀಪಾಳಿಯನ್ನು ಮಕ್ಕಳು ಹೇಗೆ ಆಚರಿಸುತ್ತಾರೆ? ಕೇವಲ ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ ಮಾತ್ರ ಹೀಗೆ ಮಾಡಲು ಧೈರ್ಯ ಹೇಗೆ? ಶೀಘ್ರದಲ್ಲೇ ಮೇಕೆಗಳ ಬಲಿ ಹಾಗೂ ಮೊಹರಂ ರಕ್ತಪಾತವನ್ನೂ ನಿಷೇಧಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ದೀಪಾಳಿಗೆ ಪಟಾಕಿಯನ್ನು ನೀಷೆಧ ಮಾಡುವುದು ಕ್ರಿಸ್‍ಮಸ್ ಹಬ್ಬಕ್ಕೆ ಕ್ರಿಸ್‍ಮಸ್ ಟ್ರೀ ನಿಷೇಧ ಮಾಡಿದ ಹಾಗೆ. ಬಕ್ರೀದ್‍ಗೆ ಮೇಕೆಗಳನ್ನ ನಿಷೇಧಿಸಿದ ಹಾಗೆ. ನಿಯಂತ್ರಣ ಮಾಡಿ. ಆದ್ರೆ ನಿಷೇಧ ಬೇಡ. ಸಂಪ್ರದಾಯಗಳನ್ನ ಗೌರವಿಸಿ ಎಂದಿದ್ದಾರೆ.

ಇದು ಕೇವಲ ವರ್ಷದಲ್ಲಿ ಒಂದು ಸಲ ಬರುವಂತದ್ದು. ನಮ್ಮ ಬಹುದೊಡ್ಡ ಹಬ್ಬವಿದು. ಯಾವುದೇ ನಿಷೇಧಕ್ಕಿಂತ ಊಬರ್ ಹೆಚ್ಚಿನ ಮಾಲಿನ್ಯವನ್ನ ಉಳಿಸಿದೆ. ಹೊಸ ಪರಿಹಾರಗಳೊಂದಿಗೆ ಬನ್ನಿ. ನಿಷೇಧವಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಭಗತ್ ಅವರ ಟ್ವೀಟ್‍ಗಳಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದು, ನೀವು ಹೇಳಿರುವ ಆಚರಣೆಗಳ ಉದಾಹರಣೆಗಳನ್ನ ನೋಡುವುದಾದ್ರೆ ಅವೆಲ್ಲಾ ಅಚರಣೆಗಳ ಅವಿಭಾಜ್ಯ ಅಂಗ. ಅವುಗಳನ್ನ ಬ್ಯಾನ್ ಮಾಡುವುದೆಂದರೆ ದೀಪಾವಳಿಗೆ ದೀಪಗಳನ್ನ ಬ್ಯಾನ್ ಮಾಡಿದಂತೆ. ಪಟಾಕಿಗಳು ಹೆಚ್ಚುವರಿಯಾಗಿ ಸೇರಿಸಲಾಗಿರುವಂತದ್ದು ಎಂದಿದ್ದಾರೆ.

ಕ್ರಿಕೆಟರ್ ಯುವರಾಜ್ ಸಿಂಗ್ ತಮ್ಮ ಟ್ವಿಟ್ಟರ್‍ನಲ್ಲಿ `ಸೇ ನೋ ಟು ಕ್ರ್ಯಾಕರ್ಸ್’ ಎಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮಾಲಿನ್ಯರಹಿತ ದೀಪಾವಳಿ ಆಚರಿಸೋಣ ಎಂದಿದ್ದಾರೆ.

ಇನ್ನುಳಿದಂತೆ ನಿರೂಪಕರಾದ ರಾಕಿ ಮತ್ತು ಮಯೂರ್ ಪಟಾಕಿಯನ್ನ ವಿರೋಧಿಸಿದ್ದಾರೆ. ಪಟಾಕಿಯ ಹೊಗೆ ಅಂದ್ರೆ ಕಾನ್ಸರ್‍ಕಾರಕ ಅಂಶಗಳು. ಜೊತೆಗೆ ತೀವ್ರ ಉಸಿರಾಟದ ತೊಂದರೆಗಳನ್ನ ಉಂಟು ಮಾಡಬಹುದಾದ ಮಾಲಿನ್ಯ. ಇದರಿಂದ ಮಕ್ಕಳು ಹಾಗೂ ಹಿರಿಯರಿಗೆ ಹೆಚ್ಚಾಗಿ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ವಾಯುಮಾಲಿನ್ಯ ಹೆಚ್ಚಾಗುವ ಕಾರಣ 2016 ನವೆಂಬರ್ ನಲ್ಲಿಯೇ ಸುಪ್ರೀಂ ಕೋರ್ಟ್ ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಪ್ರದೇಶದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿತ್ತು. ಕಳೆದ ತಿಂಗಳು ಕೋರ್ಟ್ ತಾತ್ಕಾಲಿಕವಾಗಿ ಪಟಾಕಿ ಮಾರಾಟವನ್ನು ನಿಷೇಧಿಸಿತ್ತು.

2015 ರಲ್ಲಿ ದೀಪಾವಳಿ ಹಬ್ಬದಂದು ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದರಿಂದ ಜನರಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಕಂಡುಬಂದಿತ್ತು. ಹೀಗಾಗಿ 2015 ರಲ್ಲಿ ಮೂವರು ಬಾಲಕರು ದೆಹಲಿಯಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿ ಎಂದು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆರೋಗ್ಯವಂತರಾಗಿ ಜೀವನ ನಡೆಸಬೇಕೆಂದು ಸಂವಿಧಾನ ನಮಗೆ ಬದುಕುವ ಹಕ್ಕು ನೀಡಿದೆ. ಆದರೆ ಪಟಾಕಿಯಲ್ಲಿರುವ ರಾಸಾಯನಿಕ ಅಂಶಗಳಿಂದಾಗಿ ವಾಯುಮಾಲಿನ್ಯ ಆಗುವುದಲ್ಲದೇ ನಮಗೆ ಅಸ್ತಮಾ, ಕೆಮ್ಮು, ಇತ್ಯಾದಿ ಆರೋಗ್ಯ ಸಮಸ್ಯೆಗಳು ಬರುತ್ತಿದೆ. ಹೀಗಾಗಿ ಪಟಾಕಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಬಾಲಕರು ಅರ್ಜಿಯಲ್ಲಿ ಮನವಿ ಮಾಡಿದ್ದರು.

ಆದರೆ ಪಟಾಕಿ ಅಂಗಡಿಯ ಮಾಲೀಕರು, ದೆಹಲಿಯಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿದರೆ ಜೀವನೋಪಾಯಕ್ಕೆ ಸಮಸ್ಯೆಯಾಗುತ್ತದೆ. ಹೀಗಾಗಿ ನಿಷೇಧ ಮಾಡಬಾರದು ಎಂದು ವಾದಿಸಿದ್ದರು. ಕೋರ್ಟ್ ಸಾರ್ವಜನಿಕರ ಆರೋಗ್ಯದ ಕಾಳಜಿಯಿಂದ ನವೆಂಬರ್ 1ರ ರವರೆಗೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿ ಆದೇಶ ಪ್ರಕಟಿಸಿದೆ.

https://twitter.com/Crimson_Bud/status/917343745552478209?

https://twitter.com/autumnrainwish/status/917272332032282624?

Click to comment

Leave a Reply

Your email address will not be published. Required fields are marked *