ತಿರುವನಂತಪುರಂ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಕಿವಿಸ್ 40 ರನ್‍ಗಳ ಗೆಲುವು ಸಾಧಿಸಿದ್ದರೆ, ಪಂದ್ಯದ ನಂತರ ನಡೆದ ಚೆಸ್ ಆಟದಲ್ಲಿ ಭಾರತದ ಯುವ ಸ್ಪೀನ್ ಬೌಲರ್ ಯಜುವೇಂದ್ರ ಚಹಲ್ ಕಿವಿಸ್ ಬೌಲರ್ ಇಶ್ ಸೋಧಿಯನ್ನು ಚೆಸ್ ಆಟದಲ್ಲಿ ಸೋಲಿಸಿದ್ದಾರೆ.
ಯಜುವೇಂದ್ರ ಚಹಲ್ ಮತ್ತು ಇಶ್ ಸೋಧಿ ಇಬ್ಬರು ಚೆಸ್ ಪ್ರಿಯರಾಗಿದ್ದು, ಪಂದ್ಯದ ನಂತರ ಚಹಲ್ ಕಿವಿಸ್ ಬೌಲರ್‍ಗೆ ತನ್ನೊಂದಿಗೆ ಆನ್ ಲೈನ್ ನಲ್ಲಿ ಚೆಸ್ ಆಡುವಂತೆ ಚಾಲೆಂಜ್ ನೀಡಿದ್ದಾರೆ. ಇಬ್ಬರ ನಡುವೆ ನಡೆದ ಚೆಸ್ ಪಂದ್ಯದಲ್ಲಿ ಚಹಲ್ ಚೆಕ್ ನೀಡುವ ಮೂಲಕ ಗೆಲುವು ಸಾಧಿಸಿದ್ದು, ಇಬ್ಬರು ಈ ಕುರಿತು ಟ್ವೀಟ್ ಮಾಡಿದ್ದಾರೆ.
Advertisement
Hard luck my brother ???? @ish_sodhi #betterlucknexttime???? pic.twitter.com/XzimLDwKT3
— Yuzvendra Chahal (@yuzi_chahal) November 5, 2017
Advertisement
ಮೊದಲು ನಡೆದ ಪಂದ್ಯದಲ್ಲಿ ಚಹಲ್ ಗೆಲುವು ಪಡೆದ ಸಮಯದಲ್ಲಿ ಸೋಧಿ ಎರಡನೇ ಪಂದ್ಯ ಆಡುವುವಂತೆ ಚಾಲೆಂಜ್ ನೀಡಿದ್ದಾರೆ. ನಂತರ ಇವರಿಬ್ಬರು ತಿರುವನಂತಪುರಂಗೆ ಬರುತ್ತಿದ್ದ ವಿಮಾನದಲ್ಲಿ ಚೆಸ್ ಆಡಿದ್ದಾರೆ. ಈ ಪಂದ್ಯದಲ್ಲೂ ಚಹಲ್ ಗೆಲವು ಪಡೆದಿದ್ದು, ಈ ಕುರಿತು ಚಹಾಲ್ ‘ಹಾರ್ಡ್ ಲಕ್ ಮೈ ಬ್ರದರ್’ ಎಂದು ಟ್ವೀಟ್ ಮಾಡಿದ್ದಾರೆ.
Advertisement
ಚಹಲ್ ಅವರೊಂದಿಗಿನ ಚೆಸ್ ಪಂದ್ಯದಲ್ಲಿ ಸೋತ ಕಿವಿಸ್ ಇಶ್ ಸೋಧಿ, ಚಹಲ್ ಒಬ್ಬ ಚೆಸ್ ಚಾಂಪಿಯನ್ ಆಗಿದ್ದು, ಅವರ ವಿರುದ್ಧ ಚಾಲೆಂಜ್ ಉತ್ತಮವಾಗಿತ್ತು. ಆದರೆ ಚಾಲೆಂಜ್ ನನ್ನ ಪರವಾಗಿ ಇರಲಿಲ್ಲ. ಇಬ್ಬರು ಎರಡು ಪಂದ್ಯಗಳನ್ನು ಆಡಿದ್ದೇವೆ. ನಾನು ಚಹಲ್ ಆಟದ ಬಗ್ಗೆ ಊಹಿಸಿರಲಿಲ್ಲ. ಇಬ್ಬರ ನಡುವಿನ ಪಂದ್ಯ ಎಲ್ಲರಿಗೂ ನಗೆ ಮೂಡಿಸಿತ್ತು ಎಂದು ಟ್ವೀಟ್ ಮಾಡಿದ್ದಾರೆ.
Advertisement
Rematch has already happend… fair to say, chess champion for a reason ???????? @yuzi_chahal #toogood pic.twitter.com/8cHxbFoXGy
— Ish Sodhi (@ish_sodhi) November 5, 2017
ಮೂಲತಃ ಭಾರತದ ಯಜುವೇಂದ್ರ ಚಹಲ್ ಚೆಸ್ ಆಟಗಾರ. ಭಾರತದ ಪರ ಏಷ್ಯಾ ಮತ್ತು ವಿಶ್ವ ಯುವ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಚಹಲ್ ಏಳು ವರ್ಷ ಇದ್ದಾಗಲೇ ಚೆಸ್ ಹಾಗು ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಅಲ್ಲದೆ ಅಂಡರ್-ಚೆಸ್ ರಾಷ್ಟ್ರೀಯ ಚಾಪಿಂಯನ್ ಸಹ ಆಗಿದ್ದರು. ಆದರೆ ಪ್ರಯೋಜಕರ ಕೊರತೆಯಿಂದಾಗಿ ಚೆಸ್ ಆಟದಿಂದ ಹಿಂದಕ್ಕೆ ಸರಿದರು.
ಕಿವಿಸ್ ಸ್ಪೀನರ್ ಇಶ್ ಸೋಧಿ ಭಾರತದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 25 ರನ್ ನೀಡಿ 4 ವಿಕೆಟ್ ಕಬಳಿಸಿದ್ದರೆ, ಎರಡನೇ ಪಂದ್ಯದಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದಿದ್ದರು.
@yuzi_chahal ???????????? pic.twitter.com/W4d4u3JRbX
— UV (@yuvasankar7) November 5, 2017