ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ (D Gukesh) ಇಂದು (ಡಿ.26) ರಜನಿಕಾಂತ್ (Rajinikanth) ಮತ್ತು ‘ಅಮರನ್’ ನಟ ಶಿವಕಾರ್ತಿಕೇಯನ್ (Sivakarthikeyan) ಅವರನ್ನು ಭೇಟಿಯಾಗಿದ್ದಾರೆ. ಭಾರತಕ್ಕೆ ಹೆಮ್ಮೆ ತಂದಿರುವ ಗುಕೇಶ್ ಸಾಧನೆಯನ್ನು ಕೊಂಡಾಡಿ ತಲೈವಾ ಮತ್ತು ಶಿವಕಾರ್ತಿಕೇಯನ್ ಶುಭಹಾರೈಸಿದ್ದಾರೆ.
Thanks Superstar @rajinikanth sir for your warm wishes and inviting ,spending time and sharing your wisdom with us 🙏 pic.twitter.com/l53dBCVVJH
— Gukesh D (@DGukesh) December 26, 2024
Advertisement
ಗುಕೇಶ್ ತಮ್ಮ ಪೋಷಕರೊಂದಿಗೆ ರಜನಿಕಾಂತ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ತಲೈವಾ ಗುಕೇಶ್‌ಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಪುಸ್ತಕವೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ ತಲೈವಾ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ‘ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಾರೈಕೆಗಳಿಗೆ ಧನ್ಯವಾದಗಳು. ನಮ್ಮನ್ನು ಮನೆಗೆ ಆಹ್ವಾನಿಸಿ, ನಮ್ಮೊಂದಿಗೆ ಅಮೂಲ್ಯವಾದ ಸಮಯ ಕಳೆದು, ಜ್ಞಾನ ಹಂಚಿಕೊಂಡಿದ್ದಕ್ಕೆ ಧನ್ಯವಾದ ಸರ್’ ಎಂದು ಗುಕೇಶ್ ಬರೆದುಕೊಂಡಿದ್ದಾರೆ.
Advertisement
Had a great time with @Siva_Kartikeyan sir and he was kind enough to spend time with me and my family despite his busy schedule and enjoyed a lot! pic.twitter.com/GnnGx3wDs4
— Gukesh D (@DGukesh) December 26, 2024
Advertisement
ಬಳಿಕ ‘ಅಮರನ್’ ನಟ ಶಿವಕಾರ್ತಿಕೇಯನ್ ಅವರ ನಿವಾಸಕ್ಕೆ ಗುಕೇಶ್ ಫ್ಯಾಮಿಲಿ ಭೇಟಿ ಮಾಡಿದ್ದಾರೆ. ವಿಶ್ವ ಚೆಸ್ ಚಾಂಪಿಯನ್ (Chess Champion) ಆಗಿ ಗೆದ್ದ ಖುಷಿಯನ್ನು ನಟನೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಬಳಿಕ ಗುಕೇಶ್‌ಗೆ ದುಬಾರಿ ವಾಚ್‌ವೊಂದನ್ನು ಶಿವಕಾರ್ತಿಕೇಯನ್ ಉಡುಗೊರೆಯಾಗಿ ನೀಡಿದ್ದಾರೆ.