ಮಂಡ್ಯ: ವಿದ್ಯುತ್ ಲೈನ್ ಸರಿ ಪಡಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಚೆಸ್ಕಾಂ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ರೊಟ್ಟಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ರೊಟ್ಟಿಕಟ್ಟೆ ಗ್ರಾಮದ ಮಳವಳ್ಳಿ-ಕೊಳ್ಳೆಗಾಲ ರಾಷ್ಟ್ರೀಯ ಹೆದ್ದಾರಿ ಬಳಿ ಘಟನೆ ನಡೆದಿದೆ. ಮಹಮ್ಮದ್ ಅರ್ಷದ್ ಅಲಿ(28) ಮೃತ ಲೈನ್‌ಮ್ಯಾನ್. ಇದನ್ನೂ ಓದಿ: ಜನಪರವಾದ ಅತ್ಯುತ್ತಮ ದಾಖಲೆಯ ಬಜೆಟ್ – ಕೆ.ಹೆಚ್ ಮುನಿಯಪ್ಪ
- Advertisement
ಅರ್ಷದ್ ಅಲಿ ವಿದ್ಯುತ್ ಕಂಬಕ್ಕೆ ಹತ್ತಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದಿದ್ದು, ಪರಿಣಾಮ ವಿದ್ಯುತ್ ಕಂಬದ ಮೇಲೆ ಪ್ರಾಣ ಬಿಟ್ಟಿದ್ದಾರೆ. 11ಕೆವಿ ಲೈನ್‌ನಲ್ಲಿ ಓವರ್ ಲೋಡ್‌ನಿಂದ ಪದೇ ಪದೇ ವಿದ್ಯುತ್ ಕಡಿತವಾಗುತ್ತಿತ್ತು. ಅಧಿಕಾರಿಗಳ ಸೂಚನೆಯಂತೆ ಮೂವರು ಲೈನ್‌ಮ್ಯಾನ್‌ಗಳು ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಅಮ್ಮ ನನ್ನ ಯಾಕೆ ಬಿಟ್ಟು ಹೋದೆ: ಅಗಲಿದ ತಾಯಿಯ ಬಗ್ಗೆ ಶುಭಾ ಪೂಂಜಾ ಪೋಸ್ಟ್
- Advertisement
ಹೀಗಾಗಿ ಅರ್ಷದ್ ಅಲಿ, ಸುರೇಶ್, ಜಗದೀಶ್ ಫ್ಯೂಸ್ ತೆಗೆದು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ ಪರಿಣಾಮ ವಿದ್ಯುತ್ ಕಂಬದಲ್ಲಿದ್ದ ಅರ್ಷದ್ ಅಲಿ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೆಲಸ ಮುಗಿಸಿ ಮಾಹಿತಿ ನೀಡುವ ಮೊದಲೇ ವಿದ್ಯುತ್ ಪ್ರವಹಿಸಿದ್ದು, ಕೆಇಬಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: 11 ತಿಂಗಳು 200 ರೂ., 1 ತಿಂಗಳು 300 ರೂ. ಕಡಿತ – ಏನಿದು ಉದ್ಯೋಗಿಗಳ ವೃತ್ತಿ ತೆರಿಗೆ ಲೆಕ್ಕಾಚಾರ?
ಬೆಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.