ಹುಬ್ಬಳ್ಳಿ/ಧಾರವಾಡ: ಯುವತಿಯರನ್ನು ಚುಡಾಯಿಸುತ್ತಿದ್ದ ರೋಡ್ ರೋಮಿಯೊಗಳನ್ನು ಮಫ್ತಿಯಲ್ಲಿದ್ದ ಹುಬ್ಬಳ್ಳಿ ಚನ್ನಮ್ಮ ಪಡೆ ಬಂಧಿಸಿದೆ.
ತನ್ವಿರ್ ಶಕೀನಾ (19), ಆರೀಫ್ ಮುಲ್ಲಾ (20), ತೌಸೀಫ್ ಕುಂದಗೋಳ (19), ಸಮಿರ ಅರಳಿಕಟ್ಟಿ (18), ಉಮರ್ ಫಾರೂಕ್ ಬೇಪಾರಿ (20), ಉಮರಪಾರುಕ್ ಕರಡಿ (20) ಮತ್ತು ಉಸ್ಮಾನ್ ಕರಡಿ (19) ಬಂಧಿತ ಆರೋಪಿಗಳು. ಈ ಪುಡಾರಿಗಳು ಕಾಲೇಜಿಗೆ ಬರುತ್ತಿದ್ದ ಯುವತಿಯರಿಗೆ ಕೆಲವು ದಿನಗಳಿಂದ ತೊಂದರೆ ನೀಡುತ್ತಿದ್ದರು.
Advertisement
ಹುಬ್ಬಳ್ಳಿಯ ಘಂಟಿಕೇರಿ ಓಣೆಯ ನೆಹರು ಕಾಲೇಜು, ವಿರಾಪೂರ ಓಣಿ, ಸೆಟಲ್ಮೆಂಟ್ ಹತ್ತಿರ ರಸ್ತೆ ಬದಿ ನಿಂತು ಈ ಯುವಕರು ಯುವತಿಯರನ್ನು ಚುಡಾಯಿಸುತ್ತಿದ್ದರು. ಹುಬ್ಬಳ್ಳಿಯಲ್ಲಿ ಪ್ರತಿ ಕಾಲೇಜಿನ ಬಳಿಯೂ ಚನ್ನಮ್ಮ ಪಡೆಯನ್ನು ಆಯೋಜನೆ ಮಾಡಲಾಗಿದೆ.
Advertisement
Advertisement
ಮಫ್ತಿಯಲ್ಲಿದ್ದ ಪಡೆ ಯುವತಿಯನ್ನು ಚುಡಾಯಿಸುತ್ತಿದ್ದ ರೋಡ್‍ರೋಮಿಗಳನ್ನು ಗಮನಿಸಿದ್ದಾರೆ. ಬಳಿಕ ಹುಬ್ಬಳ್ಳಿ-ಧಾರವಾಡ ಪೋಲಿಸ್ ಆಯುಕ್ತ ಎಮ್.ಎನ್ ನಾಗರಾಜ್ ಹಾಗೂ ಬೆಂಡಿಗೇರಿ ಇನ್ಸ್ ಪೆಕ್ಟರ್ ಮಾರ್ಗದರ್ಶನದಲ್ಲಿ ರೋಡ್ ರೋಮಿಯೋಗಳನ್ನು ಬಂಧಿಸಲಾಗಿದೆ.
Advertisement
ರೋಡ್ ರೋಮಿಯೋಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾದ ಚನ್ನಮ್ಮ ಪಡೆಗೆ ನಾಗರಾಜ್ ಅವರು ವಿಶೇಷ ಬಹುಮಾನ ಘೋಷಣೆ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿ ಬೆಂಡಿಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.