ಶಾರ್ಜಾ: ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿದೆ.
Advertisement
ಶಾರ್ಜಾದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಆರ್ಸಿಬಿ ಚಾಲೆಂಜರ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‍ಗೆ 111 ರನ್ ಕಲೆ ಹಾಕಿದ ಈ ಜೋಡಿ, ಬೃಹತ್ ಮೊತ್ತ ಪೇರಿಸುವ ಆಸೆ ಹುಟ್ಟಿಸಿತು. ವಿರಾಟ್ ಕೊಹ್ಲಿ 41 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 53 ರನ್‍ಗಳಿಸಿದರೆ, ಪಡಿಕ್ಕಲ್ 50 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ನೆರವಿನಿಂದ 70 ರನ್ ಗಳಿಸಿ ಔಟಾದರು. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಇತಿಹಾಸಕ್ಕೆ ಇಂದಿಗೆ 14 ವರ್ಷ
Advertisement
Advertisement
ಇಬ್ಬರ ವಿಕೆಟ್ ಪತನದ ಬಳಿಕ ಆರ್ಸಿಬಿಯ ಯಾವೊಬ್ಬ ಬ್ಯಾಟ್ಸ್ ಮ್ಯಾನ್ ಕೂಡ ಚೆನ್ನೈ ಬೌಲರ್ ಗಳ ದಾಳಿಯನ್ನು ಸಮರ್ಥವಾಗಿ ಎದುರಿಸದೇ, 20 ಓವರ್ ಗಳಲ್ಲಿ ಕೇವಲ 157 ರನ್‍ಗಳ ಟಾರ್ಗೆಟ್ ನೀಡಿತು. ಚೆನ್ನೈ ಪರ ಬ್ರಾವೊ 3 ವಿಕೆಟ್ ಪಡೆದರೆ ಠಾಕೂರ್ 2 ವಿಕೆಟ್ ಪಡೆದು ಮಿಂಚಿದರು. 156 ರನ್‍ಗಳ ಚೇಸ್ ಮಾಡಲು ಕ್ರೀಸ್‍ಗಿಳಿದ ಚೆನ್ನೈ ತಂಡಕ್ಕೆ ರುತುರಾಜ್ ಗಾಯಕ್ವಾಡ್ ಹಾಗೂ ಡು ಪ್ಲೇಸಿಸ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‍ಗೆ 71 ರನ್‍ಗಳ ಜೊತೆಯಾಟ ನೀಡಿತು. ಇದನ್ನೂ ಓದಿ: ಟಿ20 ವಿಶ್ವಕಪ್ ಆಯ್ಕೆಗೆ ಇನ್ನೊಂದು ಚಾನ್ಸ್ ಕಲ್ಪಿಸಿಕೊಡಬಹುದು ಐಪಿಎಲ್?
Advertisement
ಫ್ಲಾಫ್ ಡು ಪ್ಲೇಸಿಸ್ 31 ರನ್‍ಗಳಿಸಿದರೆ, ಗಾಯಕ್ವಾಡ್ 38 ರನ್‍ಗಳಿಸಿ ಔಟಾದರು. ಬಳಿಕ ಬಂದ ಮೊಯಿನ್ ಅಲಿ 18 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ 23 ರನ್ ಗಳಿಸಿದರೆ, ಅಂಬಟಿ ರಾಯುಡು 32 ರನ್‍ಗಳಿಸಿ ಹರ್ಷಲ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್‍ನಲ್ಲಿ ಒಂದಾದ ಮಹೇಂದ್ರ ಸಿಂಗ್ ಧೋನಿ ಹಾಗೂ ಸುರೇಶ್ ರೈನಾ ಚೆನ್ನೈ ತಂಡವನ್ನು ಇನ್ನೂ 11 ಎಸೆತಗಳು ಬಾಕಿಯಿರುವಾಗಲೇ ಗೆಲುವಿನ ದಡ ಸೇರಿಸಿದರು. ಧೋನಿ 9 ಎಸೆತಗಳಲ್ಲಿ ಎರಡು ಬೌಂಡರಿ ಸಹಿತ 11 ರನ್ ಗಳಿಸಿದರೆ, ರೈನಾ 10 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್ ನೆರವಿನಿಂದ ಅಜೇಯ 17 ರನ್ ಗಳಿಸಿದರು.