ಶಾರ್ಜಾ: ಇಂದು ಶಾರ್ಜಾದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹಣಾಹಣಿ ನಡೆಯಲಿದೆ.
Advertisement
ದುಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಚೆನ್ನೈ, ಬೆಂಗಳೂರು ತಂಡವನ್ನು ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ತವಕದಲ್ಲಿದೆ. ದ್ವಿತೀಯಾರ್ಧದ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ವಿರುದ್ಧ ಹೀನಾಯವಾಗಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ತಂಡವನ್ನು ಸೋಲಿಸಿ ಶುಭಾರಾಂಭ ಮಾಡಲು ಸಿದ್ಧವಾಗಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಆಯ್ಕೆಗೆ ಇನ್ನೊಂದು ಚಾನ್ಸ್ ಕಲ್ಪಿಸಿಕೊಡಬಹುದು ಐಪಿಎಲ್?
Advertisement
Advertisement
ಐಪಿಎಲ್ ಇತಿಹಾಸದಲ್ಲಿ ಒಟ್ಟು 17 ಬಾರಿ ಸಿಎಸ್‍ಕೆ, ಆರ್ಸಿಬಿ ವಿರುದ್ಧ ಗೆದ್ದು ಬೀಗಿದ್ದು, 9 ಬಾರಿ ಆರ್ಸಿಬಿ ಚೆನ್ನೈ ವಿರುದ್ಧ ಗೆಲುವು ಸಾಧಿಸಿದೆ. ಕಳೆದ 11 ಪಂದ್ಯಗಳಲ್ಲಿ 9 ಬಾರಿ ಚೆನ್ನೈ ಆರ್ಸಿಬಿ ಮೇಲೆ ಗೆಲವು ಸಾಧಿಸಿರುವುದು ವಿಶೇಷವಾಗಿದೆ. ಉಭಯ ತಂಡದಲ್ಲೂ ಸ್ಟಾರ್ ಆಟಗಾರರಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯದವನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. ಆರ್ಸಿಬಿ ಕೂಡ ಚೊಚ್ಚಲ ಐಪಿಎಲ್ ಕಿರೀಟವನ್ನು ಗೆಲ್ಲುವ ಹಂಬಲದಲ್ಲಿದೆ. ಅಲ್ಲದೆ ಈ ಪಂದ್ಯವನ್ನು ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‍ನಲ್ಲಿ ಮೇಲೇರುವ ತವಕದಲ್ಲಿದೆ. ಇದನ್ನೂ ಓದಿ: ಆರ್ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್
Advertisement
ತಂಡದ ಬಲಾಬಲ ನೋಡುವದಾದರೇ, ಫಾಫ್ ಡು ಪ್ಲೆಸಿಸ್, ಗಾಯಕ್‍ವಾಡ್, ಸುರೇಶ್ ರೈನಾ, ನಾಯಕ ಎಂ.ಎಸ್ ಧೋನಿ, ಜಡೇಜಾ, ರಾಯುಡು ಅಂತಾ ಸ್ಟಾರ್ ಆಟಗಾರರು ಬ್ಯಾಟಿಂಗ್‍ನಲ್ಲಿ ಚೆನ್ನೈಗೆ ಬಲ ತುಂಬಾಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಡ್ವೇನ್ ಬ್ರಾವೊ, ಶಾರ್ದೂಲ್ ಠಾಕೂರ್. ದೀಪಕ್ ಚಾಹರ್‍ರಂತ ಆಟಗಾರರಿದ್ದಾರೆ. ಸಾಂಘಿಕ ಹೋರಾಟ ಚೆನ್ನೈ ತಂಡದ ಗೆಲುವಿನ ಗುಟ್ಟು ಎಂದು ಹೇಳಬಹುದು. ಆರ್ಸಿಬಿ ತಂಡವು ಚೆನ್ನೈ ತಂಡದಷ್ಟೆ ಬಲಿಷ್ಟವಾಗಿದೆ. ಎಬಿ ಡಿವಿಲಿಯರ್ಸ್, ಮ್ಯಾಕ್ಸ್‍ವೆಲ್, ದೇವದತ್ತ ಪಡಿಕ್ಕಲ್, ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ತಂಡಕ್ಕೆ ಆಸರೆಯಾಗಬಲ್ಲರು. ಬೌಲಿಂಗ್ ವಿಭಾಗದಲ್ಲಿ ಸಿರಾಜ್, ಚಾಹಲ್, ಹರ್ಷಲ್ ಪಾಟೇಲ್, ಕೈಲ್ ಜೇಮೀಸನ್ ಎದುರಾಳಿ ತಂಡವನ್ನು ಕಡಿಮೆ ರನ್‍ಗಳಿಗೆ ಕಟ್ಟಿಹಾಕಬಲ್ಲರು.
ಚೆನ್ನೈ ತಂಡದ ಆಟಗಾರರು ಉತ್ತಮ ಫಾರ್ಮ್‍ನಲ್ಲಿದ್ದು, ಅಲ್ಲದೆ ಬೌಲಿಂಗ್ ವಿಭಾಗ ಆರ್ಸಿಬಿ ತಂಡಕ್ಕಿಂತಲೂ ಕೊಂಚ ಬಲಿಷ್ಟವಾಗಿದೆ. ಆರ್ಸಿಬಿ ತಂಡ ಬ್ಯಾಟಿಂಗ್‍ನಲ್ಲಿ ನಾಯಕ ವಿರಾಟ್ ಕೊಹ್ಲಿ, ಎಬಿಡಿ, ಮ್ಯಾಕ್ಸ್‍ವೆಲ್ ಮೇಲೆ ಹೆಚ್ಚು ಅವಲಂಬಿತವಾಗಿರುವುದು ತಂಡದ ಮೈನಸ್ ಪಾಯಿಂಟ್ ಎಂದು ಹೇಳಬಹುದು. ಚೆನ್ನೈ ತಂಡಕ್ಕೆ ಎಂ.ಎಸ್ ಧೋನಿಯ ಅವರ ಚಾಣಕ್ಷ್ಯ ನಾಯಕತ್ವ ಪ್ಲಸ್ ಆಗಲಿದೆ. ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದ್ದು ಉಭಯ ತಂಡಗಳ ಕಾದಾಟ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.