ಲಕ್ನೋ: ಕೊನೆಯಲ್ಲಿ ನಾಯಕ ಧೋನಿ (MS Dhoni) ಮತ್ತು ಶಿವಂ ದುಬೆ (Shivam Dube) ಅವರ ಸ್ಫೋಟಕ ಆಟದಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ರೋಚಕ 4 ವಿಕೆಟ್‌ಗಳ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಲಕ್ನೋ 7 ವಿಕೆಟ್ ನಷ್ಟಕ್ಕೆ 166 ರನ್ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಇನ್ನು ಮೂರು ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 5 ರನ್ ಹೊಡೆಯುವ ಮೂಲಕ ಜಯ ಸಾಧಿಸಿತು.
The IMPACT player does it with MAX IMPACT 🤩
Shivam Dube 🤝 MS Dhoni with a match-winning partnership 💛@ChennaiIPL are 🔙 to winning ways 😎
Scorecard ▶ https://t.co/jHrifBlqQC #TATAIPL | #LSGvCSK pic.twitter.com/AI2hJkT9Dt
— IndianPremierLeague (@IPL) April 14, 2025
ಚೆನ್ನೈ ಕಳೆದ 5 ಪಂದ್ಯಗಳಲ್ಲಿ ಸತತ ಸೋಲನ್ನು ಅನುಭವಿಸಿತ್ತು. ಈಗ 7ನೇ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ನೀಡಿದೆ. ಮುರಿಯದ 6ನೇ ವಿಕೆಟಿಗೆ ಧೋನಿ ಮತ್ತು ದುಬೆ 28 ಎಸೆತಗಳಲ್ಲಿ 57 ರನ್ ಹೊಡೆಯುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಧೋನಿ ಔಟಾದಗೇ 26 ರನ್ (11 ಎಸೆತ, 4 ಬೌಂಡರಿ) ಶಿವಂ ದುಬೆ ಔಟಾಗದೇ 43 ರನ್ (37 ಎಸೆತ, 3 ಬೌಂಡರಿ, 2 ಸಿಕ್ಸ್ ) ಹೊಡೆದರು.
ಚೆನ್ನೈ ಆರಂಭ ಉತ್ತಮವಾಗಿತ್ತು. ಮೊದಲ ವಿಕೆಟಿಗೆ ರಚಿನ್ ರವೀಂದ್ರ ಮತ್ತು ಶೇಕ್ ರಶೀದ್ 52 ರನ್ ಜೊತೆಯಾಟವಾಡಿದರು. ಇಂದು ಮೊದಲ ಪಂದ್ಯವಾಡಿದ ಶೇಕ್ ರಶೀದ್ 27 ರನ್ ಹೊಡೆದರೆ ರಚಿನ್ ರವೀಂದ್ರ 37 ರನ್(22 ಎಸೆತ, 5 ಬೌಂಡರಿ) ಹೊಡೆದು ವಿಕೆಟ್ ಒಪ್ಪಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡರೂ ದುಬೆ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ್ದರು.
𝘾𝙖𝙥𝙩𝙖𝙞𝙣 𝙋𝙖𝙣𝙩𝙖𝙨𝙩𝙞𝙘 🫡#LSG skipper brings up his maiden fifty of the season 🔥
Pick your favourite between these two specials? 🚁
Updates ▶ https://t.co/jHrifBkT14 #TATAIPL | #LSGvCSK | @RishabhPant17 pic.twitter.com/GiMky62KXP
— IndianPremierLeague (@IPL) April 14, 2025
ಲಕ್ನೋ ಪರ ನಾಯಕ ರಿಷಭ್ ಪಂತ್ ಈ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿದರು. 63 ರನ್(49 ಎಸೆತ, 4 ಬೌಂಡರಿ, 4 ಸಿಕ್ಸ್) ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ 30 ರನ್( 25 ಎಸೆತ, 2 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರು. ನೂರ್ ಅಹ್ಮದ್ ಮತ್ತು ಪತಿರಾನ ತಲಾ ಎರಡು ವಿಕೆಟ್ ಪಡೆದರು.