CricketLatestLeading NewsMain PostSports

ಪ್ಲೆ-ಆಫ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಔಟ್?

ಮುಂಬೈ: 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಬಹುತೇಕ ಪಂದ್ಯಗಳು ಅರ್ಧದಷ್ಟು ಮುಗಿದಿದೆ. ಆದರೂ, ಚೆನ್ನೈ ಸೂಪರ್‌ಕಿಂಗ್ಸ್(ಸಿಎಸ್‌ಕೆ) 6 ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ದಾಖಲಿಸಿದ್ದು, ಈ ಬಾರಿ ಪ್ಲೆಆಫ್ ತಲುಪುವ ಕನಸು ಬಹುತೇಕ ಅಂತ್ಯವಾಗಿದೆ.

ಗುಜರಾತ್ ಟೈಟನ್ಸ್, ರಾಜಾಸ್ಥಾನ್ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಕಿಂಗ್ಸ್ ಪಂಜಾಬ್, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಲಾ 6 ಪಂದ್ಯಗಳನ್ನಾಡಿದ್ದರೆ, ಆರ್‌ಸಿಬಿ, ಲಕ್ನೋ ಸೂಪರ್ ಜೈಂಟ್ಸ್, ಕೊಲ್ಕತ್ತಾ ನೈಟ್‌ರೈಡರ್ಸ್ ತಂಡಗಳು ತಲಾ 7 ಪಂದ್ಯಗಳನ್ನಾಡಿವೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ಪಂದ್ಯಗಳನ್ನಾಡಿದೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್-2 ಡೈಲಾಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ವ್ಯಂಗ್ಯ

csk won

ಐಪಿಎಲ್ ಕ್ರಮಾಂಕದಲ್ಲಿ ಟಾಪ್- 4ರಲ್ಲಿ ಗುಜರಾತ್ ಟೈಟನ್ಸ್ 6 ಪಂದ್ಯಗಳಿಗೆ ಹಾಗೂ ಆರ್‌ಸಿಬಿ ತಂಡವು 7 ಪಂದ್ಯಗಳಿಗೆ ತಲಾ ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 10 ಅಂಕಗಳನ್ನು ಗಳಿದ್ದರೆ, ರಾಜಾಸ್ಥಾನ್, ಲಕ್ನೋ ಮತ್ತು ಹೈದರಾಬಾದ್ ತಂಡವು ತಲಾ 8 ಅಂಕಗಳನ್ನು ಪಡೆದಿವೆ. ನಂತರದ ಸ್ಥಾನಲ್ಲಿರುವ ಕೆಕೆಆರ್ ಮತ್ತು ಪಂಜಾಬ್ 6 ಅಂಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 4 ಅಂಕಗಳನ್ನು ಪಡೆದಿದೆ. ಇನ್ನೂ ಸತತ ಸೋಲಿನ ರುಚಿ ಕಂಡಿರುವ ಮುಂಬೈ ಒಂದೂ ಅಂಕವನ್ನು ಗಳಿಸದೇ ಕೊನೆಯಲ್ಲಿದೆ. ಒಂದೇ ಒಂದು ಪಂದ್ಯ ಗೆದ್ದಿರುವ ಚೆನ್ನೈ 9ನೇ ಸ್ಥಾನದಲ್ಲಿದೆ. ಹಾಗಾಗಿ, ಸಿಎಸ್‌ಕೆ ತಂಡ ಈ ಬಾರಿ ಪ್ಲೇ-ಆಫ್ ಸುತ್ತಿಗೆ ಬರುವುದು ಕಷ್ಟ ಎನ್ನಲಾಗಿದೆ. ಇನ್ನು ಒಂದು ಪಂದ್ಯದಲ್ಲಿ ಸೋತರೂ ಶೇ.95ರಷ್ಟು ಪ್ಲೇ-ಆಫ್ ಸುತ್ತಿಗೆ ಪ್ರವೇಶ ಪಡೆಯುವುದಿಲ್ಲ ಎಂದು ಐಪಿಎಲ್ ಮಂಡಳಿ ಹೇಳಿದೆ. ಇದನ್ನೂ ಓದಿ: ಐಪಿಎಲ್ 2022: ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಮಿಚೆಲ್ ಮಾರ್ಷ್‍ಗೆ ಕೋವಿಡ್ ದೃಢ

IPL 2022 RR VS LSG (3)

ಐಪಿಎಲ್ ಪ್ಲೆಆಫ್ ಸುತ್ತಿಗೆ ತಲುಪಲು ಕನಿಷ್ಠ 7 ಪಂದ್ಯಗಳನ್ನು ಗೆದ್ದಿರಬೇಕು. ಮೊದಲ 2 ಸ್ಥಾನದಲ್ಲಿರುವ ತಂಡ ಹೆಚ್ಚು ಗೆಲುವು ಸಾಧಿಸಿದ್ರೆ, 3 ಅಥವಾ 4ನೇ ಸ್ಥಾನದಲ್ಲಿರುವ ತಂಡಗಳು 8 ಪಂದ್ಯಗಳನ್ನು ಗೆದ್ದು ಪ್ಲೆಆಫ್ ಸೇರುತ್ತವೆ. ಕೆಲವೊಮ್ಮೆ ರನ್‌ರೇಟ್ ಹೆಚ್ಚಾಗಿದ್ದಾಗ 7 ಪಂದ್ಯಗಳನ್ನು ಗೆದ್ದ ತಂಡಗಳು ಪ್ಲೆ-ಆಫ್ ಸೇರಿದ್ದ ಉದಾಹರಣೆಗಳಿವೆ. ಹಾಗಾಗಿ ಸಿಎಸ್‌ಕೆ ತಂಡವು ಉಳಿದ 8 ಪಂದ್ಯಗಳಲ್ಲಿ ಕನಿಷ್ಠ 6 ಅಥವಾ 7 ಪಂದ್ಯಗಳನ್ನಾದರೂ ಗೆದ್ದರೆ ಪ್ಲೆ-ಆಫ್ ಕನಸು ಕೊಂಚವಾದರೂ ಜೀವಂತವಾಗಿರಿಸಿಕೊಳ್ಳಬಬಹುದು ಎನ್ನಲಾಗುತ್ತಿದೆ.  ಇದನ್ನೂ ಓದಿ: 2023ರಲ್ಲಿ ಆರಂಭಗೊಳ್ಳಲಿದೆ 6 ತಂಡಗಳ ನಡುವಿನ ಮಹಿಳಾ ಐಪಿಎಲ್

IPL 2022 SRH (1)

ಕಳಪೆ ಬೌಲಿಂಗ್: ಸಿಎಸ್‌ಕೆ ತಂಡ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಇದ್ದರೂ, ಬೌಲಿಂಗ್ ವಿಭಾಗ ಕೆಟ್ಟ ಪ್ರದರ್ಶನ ನೀಡುತ್ತಿದೆ. ತಂಡ 200 ಸಮೀಪ ರನ್‌ಗಳಿಸಿದರೂ ಬೌಲಿಂಗ್ ವೈಫಲ್ಯದಿಂದ ಗೆಲುವನ್ನು ಕೈಚೆಲ್ಲಬೇಕಾಗುತ್ತಿದೆ. ಹಾಗಾಗಿ, ಆಟಗಾರರು ಎದುರಾಳಿಯ ಸಂಪೂರ್ಣ ವಿಕೆಟ್ ಪಡೆದರೆ ಮಾತ್ರ ಸಿಎಸ್‌ಕೆ ತಂಡ ಮುಂಬರುವ ಪಂದ್ಯಗಳನ್ನು ಗೆಲ್ಲಲು ಸಾಧ್ಯ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಿಎಸ್‌ಕೆ ಅಭಿಮಾನಿಗಳು ಪ್ಲೆ ಆಫ್ ತಲುಪುತ್ತದೆ ಎನ್ನುವ ಭರವಸೆಯನ್ನೇ ಕಳೆದುಕೊಂಡಿದ್ದು, ಇದಕ್ಕಾಗಿ ಚೆನ್ನೈ ಹೊಸ ಆಲೋಚನಾ ಕ್ರಮದಲ್ಲಿ ಮುಂದಿನ ಪಂದ್ಯಗಳನ್ನು ಎದುರಿಸಲು ಸಜ್ಜಾಗುತ್ತಿದೆ.

Leave a Reply

Your email address will not be published.

Back to top button