Cricket

ಸಿಕ್ಸರ್ ಮೂಲಕ ಗೇಮ್ ಫಿನಿಶ್ ಮಾಡಿದ ಧೋನಿ- ಹೈದರಾಬಾದ್ ವಿರುದ್ಧ ಚೆನ್ನೈಗೆ 6 ವಿಕೆಟ್ ಜಯ

Published

on

Share this

ದುಬೈ: ಬಹಳ ದಿನಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಕ್ಸ್ ಸಿಡಿಸುವ ಮೂಲಕ ಗೇಮ್ ಫಿನಿಶ್ ಮಾಡಿದ್ದಾರೆ. ಈ ಮೂಲಕ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿ ಫ್ಲೇ ಆಫ್‍ಗೆ ಮೊದಲ ತಂಡವಾಗಿ ಎಂಟ್ರಿ ಕೊಟ್ಟಿದೆ.

ಹೈದಾಬಾದ್ ನೀಡಿದ 135ರನ್‍ಗಳ ಸಾಧರಣ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಋತುರಾಜ್ ಗಾಯಕ್ವಾಡ್ 45ರನ್(38 ಎಸೆತ, 4 ಬೌಂಡರಿ, 2 ಸಿಕ್ಸ್) ಮತ್ತು ಫಾಫ್ ಡು ಪ್ಲೆಸಿಸ್ 41ರನ್(36 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ 75ರನ್(61 ಎಸೆತ)ಗಳ ಜೊತೆಯಾಟವಾಡಿ ಔಟ್ ಆದರು. ಬಳಿಕ ಪಟಪಟನೇ ಎರಡು ವಿಕೆಟ್ ಕಳೆದುಕೊಂಡ ಚೆನ್ನೈ ತಂಡಕ್ಕೆ ನಂತರ ಬಂದ ಅಂಬಾಟಿ ರಾಯುಡು 17ರನ್(13 ಎಸೆತ,1 ಬೌಂಡರಿ, 1 ಸಿಕ್ಸ್) ಮತ್ತು ಧೋನಿ 14ರನ್(11 ಎಸೆತ, 1 ಸಿಕ್ಸ್ 1 ಬೌಂಡರಿ) ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಜೋಶ್ ಹೇಜಲ್‍ವುಡ್ ಮಾರಕ ದಾಳಿ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡಕ್ಕೆ ಜೋಶ್ ಹೇಜಲ್‍ವುಡ್ ಮಾರಕವಾಗಿ ಎರಗಿ ಮೂರು ವಿಕೆಟ್ ಕಿತ್ತು ಮಿಂಚಿದರು. ಆರಂಭಿಕ ಆಟಗಾರ ಜೇಸನ್ ರಾಯ್ ಕೇವಲ 2ರನ್(7 ಎಸೆತ) ಮಾಡಿ ಹೇಜಲ್‍ವುಡ್ ಎಸೆತದಲ್ಲಿ ಧೋನಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸದರು. ಆ ಬಳಿಕ ಬಂದ ಕೇನ್ ವಿಲಿಯಮ್ಸನ್ 11ರನ್(11 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು. ನಂತರ ಬಂದ ಅಭಿಷೇಕ್ ಶರ್ಮಾ ಮತ್ತು ಅಬ್ದುಲ್ ಸಮದ್ ತಲಾ 18ರನ್ ಸಿಡಿಸಿ ಪೇವಿಲಿಯನ್ ಸೇರಿಕೊಂಡರು.

ಒಂದು ಕಡೆ ಆರಂಭಿಕನಾಗಿ ಬಂದು ಅಬ್ಬರಿಸಿದ ವೃದ್ಧಿಮಾನ್ ಸಹಾ 44ರನ್(46 ಎಸೆತ 1 ಬೌಂಡರಿ 2 ಸಿಕ್ಸ್) ಸಿಡಿಸಿ ತಂಡಕ್ಕೆ ಆಸರೆಯಾದರು ಅವರ ನಿರ್ಗಮನದ ಬಳಿಕ ಕೊನೆಯಲ್ಲಿ ರಶೀದ್ ಖಾನ್ 17 ರನ್(13 ಎಸೆತ 2 ಬೌಂಡರಿ) ಸಿಡಿಸಿ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು. ಅಂತಿಮವಾಗಿ ನಿಗದಿತ ಓವರ್‍ ಗಳ ಅಂತ್ಯಕ್ಕೆ ಹೈದರಾಬಾದ್ 7 ವಿಕೆಟ್ ಕಳೆದುಕೊಂಡು 134ರನ್ ಬಾರಿಸಿತು.

ಸಿಎಸ್‍ಕೆ ಪರ ಜೋಶ್ ಹೇಜಲ್‍ವುಡ್ 3, ಬ್ರಾವೋ 2 ಜಡೇಜಾ ಮತ್ತು ಠಾಕೂರ್ ತಲಾ 1 ವಿಕೆಟ್ ಕಿತ್ತು ಮಿಂಚಿದರು.

 

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications