ಚೆನ್ನೈ: ಐಪಿಎಲ್ ಸೀಸನ್ 12 ಆರಂಭದಲ್ಲೇ ಚೆನ್ನೈ ಬೌಲಿಂಗ್ ದಾಳಿಗೆ ತತ್ತರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯಲ್ಲೇ ಸೋಲುಂಡಿದ್ದು, ಚೆನ್ನೈ 7 ವಿಕೆಟ್ ಗೆಲುವು ಪಡೆದು ಶುಭಾರಂಭ ಮಾಡಿದೆ.
ಚೆನ್ನೈ ಹಾಗೂ ಬೆಂಗಳೂರು ನಡುವೆ ಹೈವೋಲ್ಟೆಜ್ ಪಂದ್ಯವೆಂದೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಚೆನ್ನೈ ತಂಡ ಬೌಲಿಂಗ್ ದಾಳಿಗೆ ತತ್ತರಿಸಿದ ಆರ್ ಸಿಬಿ 17.1 ಓವರ್ ಗಳಲ್ಲಿ 70 ರನ್ ಗಳಿಗೆ ಅಲೌಂಟ್ ಆಯ್ತು. ಸುಲಭ ಗುರಿ ಬೆನ್ನತ್ತಿದ ಚೆನ್ನ ಆಟಗಾರರು 17.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 71 ರನ್ ಸಿಡಿಸಿ ಗೆಲುವು ಪಡೆದರು.
Advertisement
.@ChennaiIPL beat Royal Challengers Bangalore by 7 wickets in the opening encounter of #VIVOIPL 2019.#CSKvRCB pic.twitter.com/ghDdVeF9PD
— IndianPremierLeague (@IPL) March 23, 2019
Advertisement
ಚೆನ್ನೈ ತಂಡ ಪರ ವ್ಯಾಟ್ಸನ್ ಶೂನ್ಯ ಸುತ್ತಿದರೆ, ರೈನಾ 19 ರನ್, ರಾಯುಡು 28 ರನ್ ಗಳಿಸಿ ನಿರ್ಗಮಿಸಿದರು. ಜಾಧವ್ 13 ರನ್ ಹಾಗೂ ಜಡೇಜಾ 6 ರನ್ ಗಳಿಸಿ ಅಜೇಯರಾಗಿ ಉಳಿದರು.
Advertisement
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಸಿಎಸ್‍ಕೆ ನಾಯಕ ಧೋನಿ, ಕೊಹ್ಲಿ ಪಡೆಗೆ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದರು. ಆರಂಭಿಕರಾಗಿ ಕಣಕ್ಕೆ ಇಳಿದ ನಾಯಕ ಕೊಹ್ಲಿ (6 ರನ್), ಇಮ್ರಾನ್ ತಾಹಿರ್, ಅಲಿ ವಿಕೆಟ್ ಪಡೆದ ಅನುಭವಿ ಆಟಗಾರ ಹರ್ಭಜನ್ ಮಿಂಚುಹರಿಸಿದರು. ಉಳಿದಂತೆ ಆರಂಭಿಕ ಪಾರ್ಥಿವ್ ಪಾಟೇಲ್ 29 ರನ್ ಗಳಿಸಿದ್ದು ಬಿಟ್ಟರೆ ತಂಡದ ಬೇರಾವ ಆಟಗಾರ ಕೂಡ ಎರಡಂಕ್ಕಿ ಮೊತ್ತ ದಾಟಲಿಲ್ಲ.
Advertisement
Bhajji roars loud with bowling figures of 4-0-20-3 ????????????#CSKvRCB pic.twitter.com/rUKyrXQonS
— IndianPremierLeague (@IPL) March 23, 2019
ಚೆನ್ನೈ ಪರ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಹರ್ಭಜನ್ ಸಿಂಗ್ ಮತ್ತು ತಾಹಿತ್ ತಲಾ 3 ವಿಕೆಟ್ ಪಡೆದರೆ, ಜಡೇಜಾ 2, ಬ್ರಾವೋ 1 ವಿಕೆಟ್ ಕಬಳಿಸಿದರು.
ಆರ್ ಸಿಬಿ 70 ರನ್ ಗಳಿಗೆ ಅಲೌಟ್ ಆಗುವ ಮೂಲಕ ಜಂಟಿಯಾಗಿ 2ನೇ ಬಾರಿಗೆ ಕಡಿಮೆ ಮೊತ್ತ ಗಳಿಸಿತು. ಈ ಹಿಂದೆ 2014ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 70 ರನ್ ಗಳಿಗೆ ಹಾಗೂ 2017 ರಲ್ಲಿ ಕೆಕೆಆರ್ ವಿರುದ್ಧ 49 ರನ್ ಗಳಿಗೆ ಅಲೌಟಾಗಿತ್ತು.
5 ಸಾವಿರ ರನ್: ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಟಗಾರ ಸುರೇನ್ ರೈನಾ ಐಪಿಎಲ್‍ನಲ್ಲಿ 5 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. 32 ವರ್ಷದ ರೈನಾ 156 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಪಂದ್ಯದಲ್ಲಿ 15 ರನ್ ಗಳಿಸಿದ್ದ ವೇಳೆ ರೈನಾ 5 ಸಾವಿರ ರನ್ ದಾಖಲೆ ನಿರ್ಮಾಣವಾಯಿತು.
There it is, the magical 5000! What a player! Mr. IPL for reason! #ChinnaThala #WhistlePodu #Yellove #CSKvRCB ???????? pic.twitter.com/lyMtouHNlG
— Chennai Super Kings (@ChennaiIPL) March 23, 2019