ಚೆನ್ನೈ: ಭಾರತ ಮತ್ತು ಚೀನಾ ನಡುವಿನ ಅನೌಪಚಾರಿಕ ಶೃಂಗಸಭೆ ಇಂದು ಮುಕ್ತಾಯವಾಗಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ.
ತಮಿಳುನಾಡಿನ ದೇಗುಲ ನಗರಿ ಮಹಾಬಲಿಪುರಂನಲ್ಲಿ ನಡೆದ ಎರಡು ದಿನಗಳ ಅನೌಪಚಾರಿಕ ಶೃಂಗಸಭೆ ಮುಕ್ತಾಯವಾಗಿದೆ. ಚೆನ್ನೈನ ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ನವದಹೆಲಿಗೆ ಹಾಗೂ ಕ್ಸಿ ಜಿನ್‍ಪಿಂಗ್ ನೇಪಾಳಕ್ಕೆ ತೆರಳಿದ್ದಾರೆ.
Advertisement
Chennai: Chinese President Xi Jinping departs for Nepal; he was on a 2-day visit to India for the second informal summit with PM Narendra Modi in Mahabalipuram. #TamilNadu pic.twitter.com/0o0cEZ4QAY
— ANI (@ANI) October 12, 2019
Advertisement
ಉಭಯ ನಾಯಕರ ಭೇಟಿ ವೇಳೆ ಕಾಶ್ಮೀರದ ವಿಚಾರವಾಗಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಕಾಶ್ಮೀರ ಸಮಸ್ಯೆಯು ಭಾರತದ ಆಂತರಿಕ ವಿಚಾರವಾಗಿದೆ. ಹೀಗಾಗಿ ಈ ಕರಿತು ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ಶೃಂಗಸಭೆಗೆ ಚೀನಾಕ್ಕೆ ಬರುವಂತೆ ಕ್ಸಿ ಜಿನ್‍ಪಿಂಗ್ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದಾರೆ. ಇದಕ್ಕೆ ಮೋದಿ ಸಮ್ಮತಿ ನೀಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ.
Advertisement
ಪ್ರಧಾನಿ ಮೋದಿ ಟ್ವೀಟ್ ಮಾಡಿ, ತಮಿಳುನಾಡಿನ ನನ್ನ ಸಹೋದರ ಸಹೋದರಿಯರಿಗೆ ವಿಶೇಷ ಧನ್ಯವಾದಗಳು. ಎಂದಿನಂತೆಯೇ ಅವರ ಆತಿಥ್ಯ ಉತ್ತಮವಾಗಿತ್ತು. ರಾಜ್ಯದ ಸೃಜನಶೀಲ ಜನರ ನಡುವೆ ಇರುವುದು ಯಾವತ್ತೂ ಸಂತೋಷದ ವಿಚಾರ. ಮಾಮಲ್ಲಪುರಂನಲ್ಲಿ ಶೃಂಗಸಭೆ ಆಯೋಜಿಸಿದ್ದಕ್ಕೆ ತಮಿಳುನಾಡು ಸರ್ಕಾರಕ್ಕೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.
Advertisement
A special Thank You to my sisters and brothers of Tamil Nadu. As always, their warmth and hospitality was outstanding. It’s always a delight to be among the people of this dynamic state. I also thank the Government of TN for their efforts in organising the Summit in Mamallapuram.
— Narendra Modi (@narendramodi) October 12, 2019
ಚೆನ್ನೈ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂದಿಳಿದಿದ್ದ ಕ್ಸಿ ಜಿನ್‍ಪಿಂಗ್ ಅವರನ್ನು ತಮಿಳುನಾಡಿನ ಸರ್ಕಾರವು ಅದ್ಧೂರಿಯಾಗಿ ಸ್ವಾಗತಿಸಿತ್ತು. ಬಳಿಕ ಪ್ರಧಾನಿ ನರೇಂದ್ರ ತಮಿಳುನಾಡಿನ ಸಾಂಪ್ರದಾಯಿಕ ಧರಿಸು ಬಿಳಿ ಪಂಚೆ, ಬಿಳಿ ಅಂಗಿ, ಶಲ್ಯ ಧರಿಸಿದ್ದ ಮೋದಿ, ಜಿನ್‍ಪಿಂಗ್ ಅವರಿಗೆ ಆತ್ಮೀಯ ಸ್ವಾಗತ ಕೋರಿದರು. ಆರಾಮಾಗಿ ಸುತ್ತಾಡುತ್ತಾ ಪಲ್ಲವರ ಕಾಲದ ದೇಗುಲಗಳ ಪರಿಚಯ ಮಾಡಿಕೊಟ್ಟರು. ಮಹಾಭಾರತದ ಅರ್ಜುನ ತಪಸ್ಸು ಮಾಡಿದ್ದ ಸ್ಥಳ, ಒಂದೆಕಲ್ಲಿನಲ್ಲಿ ಕೆತ್ತಿದ ಪಂಚ ರಥ, ಹೀಗೆ ಹಲವು ಸ್ಥಳಗಳ ಮಹಿಮೆಯನ್ನು ವಿವರಿಸಿದರು.
ಪ್ರಧಾನಿ ಮೋದಿ ಜಿನ್‍ಪಿಂಗ್ ಅವರೊಂದಿಗೆ ಸಮುದ್ರ ತೀರದಲ್ಲಿ ವಿಹರಿಸಿದರು. ಈ ವೇಳೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಆನಂದಿಸಿದರು. ನಂತರ ಜಿನ್‍ಪಿಂಗ್ ಪ್ರವಾಸದ ಗೌರವಾರ್ಥ ಪ್ರಧಾನಿ ಮೋದಿ ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂಟದಲ್ಲಿ ಚೆಟ್ಟಿನಾಡ್, ಕರೈಕುಡಿಯ ಸಾಂಪ್ರದಾಯಿಕ ತಿನಿಸುಗಳನ್ನು ಚೀನಾ ಅಧ್ಯಕ್ಷರಿಗೆ ಉಣಬಡಿಸಲಾಯಿತು.
Discussions continued with President Xi Jinping at Mamallapuram. We’ve been having productive deliberations on further improving India-China relations. pic.twitter.com/EncWliO1mG
— Narendra Modi (@narendramodi) October 12, 2019
ಪ್ರಧಾನಿ ಮೋದಿ ಇಂದು ಬೆಳಗ್ಗೆ ತಮ್ಮ ವಾಯು ವಿಹಾರದ ಸಮಯದಲ್ಲಿ ಮಾಮಲ್ಲಪುರಂ ಸಮುದ್ರ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕಸವನ್ನು ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯವನ್ನು ಮಾಡಿದರು. ಈ ಕುರಿತ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್, ಸಂಗ್ರಹಿಸಲಾದ ಕಸವನ್ನು ಹೋಟೆಲ್‍ನ ಸಿಬ್ಬಂದಿ ಜಯರಾಜ್ ಅವರಿಗೆ ನೀಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಕಾರ್ಯವನ್ನು ಮಾಡೋಣ, ಸದೃಡ ದೇಹ, ಆರೋಗ್ಯವನ್ನು ಪಡೆಯೋಣ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಸಿ ಜಿನ್‍ಪಿಂಗ್ ಅವರು ಸಭೆ ನಡೆಸಿದರು. ಬಳಿಕ ಕೋವಲಂನ ಕೋವ್ ಹೋಟೆಲ್‍ನಲ್ಲಿ ನಡೆದ ಕಲಾಕೃತಿಗಳು ಮತ್ತು ಕೈಮಗ್ಗ ಪ್ರದರ್ಶನವನ್ನು ವೀಕ್ಷಿಸಿದರು. ಈ ವೇಳೆ ಕೈಯಿಂದ ನೇಯ್ದ ಕ್ಸಿ ಜಿಂಗ್‍ಪಿಂಗ್ ಭಾವಚಿತ್ರವನ್ನು ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ನೀಡಿದರು.
PM Narendra Modi and Chinese President Xi Jinping at an exhibition on artefacts and handloom at Taj Fisherman's Cove hotel in Kovalam, Tamil Nadu. pic.twitter.com/YQS48oQwi2
— ANI (@ANI) October 12, 2019