ಚೆನ್ನೈ: ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಲಾಡ್ಜ್ ಒಂದರಲ್ಲಿ ಆಕೆಯ ಪ್ರೇಮಿಯೇ ಕೊಲೆಗೈದು ಬಳಿಕ ಮೃತದೇಹದ ಫೋಟೋವನ್ನು ಆಕೆಯ ವಾಟ್ಸಪ್ ಸ್ಟೇಟಸ್ಗೆ ಹಾಕಿದ ಘಟನೆ ಚೆನ್ನೈನಲ್ಲಿ (Chennai) ನಡೆದಿದೆ. ಮೃತದೇಹದ ಫೋಟೋವನ್ನು ಆರೋಪಿ ಆಕೆಯ ಸ್ಟೇಟಸ್ಗೆ ಹಾಕುತ್ತಿದ್ದಂತೆ ನೋಡಿದ ಸ್ನೇಹಿತರು ಪೊಲೀಸರಿಗೆ (Police) ಮಾಹಿತಿ ನೀಡಿದ್ದು, ಲಾಡ್ಜ್ನ ಸಿಸಿಟಿವಿ ಪರಿಶೀಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಯಾದ ಯುವತಿಯನ್ನು ಕೇರಳದ ಕೊಲ್ಲಂನ ಫೌಸಿಯಾ (20) ಎಂದು ಗುರುತಿಸಲಾಗಿದೆ. ಆಶಿಕ್ (20) ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಫೌಸಿಯಾ ಕ್ರೋಮ್ಪೇಟೆಯ ಕಾಲೇಜೊಂದರಲ್ಲಿ ಎರಡನೇ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ನ್ಯೂ ಕಾಲೋನಿಯ ಹಾಸ್ಟೆಲ್ನಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಡಾಕ್ಟರ್ ಆಗಬೇಕೆಂದು ಕನಸು ಕಂಡಿದ್ದ ಹುಡುಗಿ ರಕ್ತದ ಕ್ಯಾನ್ಸರ್ಗೆ ಬಲಿ – ಮಗಳ ಆಸೆಯಂತೆ ದೇಹದಾನ ಮಾಡಿದ ಪೋಷಕರು
Advertisement
Advertisement
ಎರಡು ವರ್ಷಗಳ ಹಿಂದೆ ಫೌಸಿಯಾ ಇತರ ಮಹಿಳೆಯರೊಂದಿಗೆ ಆಶಿಕ್ನ ಸಂಬಂಧದ ಬಗ್ಗೆ ತಿಳಿದು ಕೇರಳ ಪೊಲೀಸರಿಗೆ ದೂರು ನೀಡಿದ್ದಳು. ಅಲ್ಲದೇ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಳು. ಜೈಲಿನಿಂದ ಹೊರಬಂದ ಕೂಡಲೇ ಕ್ಷಮೆಯಾಚಿಸಿ ಆಕೆಯೊಂದಿಗೆ ಮತ್ತೆ ಸಂಬಂಧ ಬೆಳೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಬಾವ ನಾಪತ್ತೆ – ಕಿಡ್ನ್ಯಾಪ್ ಶಂಕೆ