ಚೆನ್ನೈ: ಇನ್ಫೋಸಿಸ್ ಉದ್ಯೋಗಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹ ಕಚೇರಿಯ ಟಾಯ್ಲೆಟ್ನಲ್ಲಿ ಪತ್ತೆಯಾದ ಘಟನೆ ಇಂದು ಚೆನ್ನೈನಲ್ಲಿ ನಡೆದಿದೆ.
32 ವರ್ಷದ ಇಳಯರಾಜ ಅರಣಾಚಲಂ ಅವರ ಬಟ್ಟೆಗಳಿಲ್ಲದ ಮೃತದೇಹ ಕಚೇರಿಯ ಟಾಯ್ಲೆಟ್ನಲ್ಲಿ ಪತ್ತೆಯಾಗಿದೆ. ಇಳಯರಾಜ ಮೂಲತಃ ತಿರುವಣ್ಣಾಮಲೈ ಜಿಲ್ಲೆಯವರಾಗಿದ್ದು, ಟಾಯ್ಲೆಟ್ನಲ್ಲಿ ಚಲನರಹಿತರಾಗಿ ಬಿದ್ದಿದ್ದನ್ನು ನೋಡಿ ಸಹೋದ್ಯೋಗಿಗಳು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಇಳಯರಾಜ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ.
Advertisement
ನಮ್ಮ ಉದ್ಯೋಗಿಗಳಲ್ಲೊಬ್ಬರು ಬುಧವಾರ ಬೆಳಿಗ್ಗೆ ಕಚೇರಿಯಲ್ಲಿ ಸಾವನ್ನಪ್ಪಿದ್ದಾರೆ. ನಾವು ಅವರನ್ನು ಗುರುತಿಸಿದ್ದೇವೆ. ಪೊಲೀಸರು ಇದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಇನ್ಫೋಸಿಸ್ ವಕ್ತಾರರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
Advertisement
ಇನ್ಫೋಸಿಸ್ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ನಮಗೆ ಕರೆ ಬಂತು. ಉದ್ಯೋಗಿಗಳು ವಿಶ್ರಾಂತಿ ಪಡೆಯಬಹುದಾದಂತಹ ಕೋಣೆಯಲ್ಲಿ ಶವ ಪತ್ತೆಯಾಗಿದೆ. ಅವರು ಯಾವುದೇ ಬಟ್ಟೆ ಧರಿಸಿರಲಿಲ್ಲ. ಅವರ ಮೇಲೆ ಎರಡು ಬೆಡ್ಶೀಟ್ಗಳಿದ್ದವು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ.
Advertisement
ಈ ಬಗ್ಗೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
Advertisement
ಜನವರಿಯಲ್ಲಿ ಪುಣೆ ಇನ್ಫೋಸಿಸ್ ಕಚೇರಿಯಲ್ಲಿ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದರು. ಕಚೇರಿಯ 9ನೇ ಮಹಡಿಯ ಕಾನ್ಫರೆನ್ಸ್ ರೂಮಿನಲ್ಲಿ ಉದ್ಯೋಗಿ ರಸೀಲಾ ರಾಜು ಶವವಾಗಿ ಪತ್ತೆಯಾಗಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಚೇರಿಯ ಸೆಕ್ಯೂರಿಟಿ ಗಾರ್ಡ್ನನ್ನು ಬಂಧಿಸಲಾಗಿತ್ತು.