ಚೆನ್ನೈ: 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಂಧಿತರಾಗಿದ್ದ ಆರೋಪಿಗಳನ್ನು ಕೋರ್ಟ್‍ನಲ್ಲಿ ವಕೀಲರು, ಸಾರ್ವಜನಿಕರು ಥಳಿಸಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಅತ್ಯಾಚಾರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿದ್ದಂತೆ, ಅವರನ್ನು ವಕೀಲರು ಥಳಿಸಿ, ಆರೋಪಿಗಳ ಪರ ವಾದ ಮಾಡಲು ನಿರಾಕರಿಸಿದರು.
Advertisement
ನಡೆದದ್ದು ಏನು?
ಸಂತ್ರಸ್ತ ಬಾಲಕಿ ತನ್ನ ಪೋಷಕರೊಂದಿಗೆ 300 ಅಪಾರ್ಟ್ ಮೆಂಟ್ ಇರುವ ಕಾಂಪ್ಲೆಕ್ಸ್‍ನಲ್ಲಿ ವಾಸವಾಗಿದ್ದಳು. ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿಯನ್ನು ತಡೆದು 66 ವರ್ಷದ ಲಿಫ್ಟ್ ಆಪರೇಟರ್ ಸಾಫ್ಟ್ ಡ್ರಿಂಕ್ಸ್‍ನಲ್ಲಿ ಅಮಲು ಬರುವ ಪದಾರ್ಥ ಹಾಕಿಕೊಟ್ಟಿದ್ದನು. ನಂತರ ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದನು. ಇದಾದ ಬಳಿಕ ಮತ್ತೊಬ್ಬ ವ್ಯಕ್ತಿಯನ್ನು ಕರೆದಿದ್ದು, ವಿಡಿಯೋ ಮಾಡಲು ಹೇಳಿದ್ದನು. ವಿಡಿಯೋ ಮಾಡಲು ಬಂದಿದ್ದ ವ್ಯಕ್ತಿಯಿಂದಲೂ ಬಾಲಕಿಯ ಅತ್ಯಾಚಾರಕ್ಕೆ ಒಳಗಾಗಿದ್ದಳು. ಹೀಗೆ ನಿರಂತರವಾಗಿ ಸೆಕ್ಯುರಿಟಿ ಗಾರ್ಡ್, ವಿದ್ಯುತ್ ಕೆಲಸಗಾರರು, ಪ್ಲಂಬರ್ ಸೇರಿದಂತೆ 18 ಜನರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
Advertisement
18 men held for allegedly sexually harassing an 11-year-old girl for over a period of 7 months in Chennai. The accused involve security men, lift operator & water suppliers in the apartment where the minor girl stays. Police investigation underway pic.twitter.com/DcJIUhwDCG
— ANI (@ANI) July 17, 2018
Advertisement
ವಿಡಿಯೋವನ್ನು ಬಹಿರಂಗ ಪಡಿಸುವುದಾಗಿ ಹೆದರಿಸಿ, ಬಾಲಕಿಯನ್ನು ಸುಮಾರು ವಾರಗಳಿಂದ ಕಾಂಪ್ಲೆಕ್ಸ್‍ನ ಬೆಸ್‍ಮೆಂಟ್, ಟೆರಸ್, ಜಿಮ್ ಮತ್ತು ಪಬ್ಲಿಕ್ ರೆಸ್ಟ್ ರೂಮ್‍ಗಳಿಗೆ ಸಾಗಿಸಲಾಗಿತ್ತು. ಬಾಲಕಿಯ ಅಕ್ಕ ಆಕೆಯನ್ನು ಪತ್ತೆ ಹಚ್ಚಿ ಮನೆಗೆ ಕರೆದು ತಂದಾಗ, ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತ ಬಾಲಕಿಯ ಪೋಷಕರು ಭಾನುವಾರ ಪ್ರಕರಣ ದಾಖಲಿಸಿದ್ದರು. ಸದ್ಯ ಆರೋಪಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
Advertisement
#WATCH: Dramatic visuals from Mahila Court in Chennai where lawyers thrash the 18 accused, who sexually harassed an 11-year-old girl for over a period of 7 months. #TamilNadu pic.twitter.com/8ASDOlm7gW
— ANI (@ANI) July 17, 2018