ಕೋಲಾರ: ತಮಿಳುನಾಡಿನ (Tamil Nadu) ಚೆನ್ನೈನಲ್ಲಿ ಚಂಡಮಾರುತ (Chennai Cyclone) ಎದ್ದಿರುವ ಪರಿಣಾಮ ಕೋಲಾರ ಜಿಲ್ಲೆಯಲ್ಲಿ ಜಡಿಮಳೆಯಾಗುತ್ತಿದೆ.
ಚೆನ್ನೈನಲ್ಲಿ ಚಂಡಮಾರುತದ ಅಬ್ಬರ ಜೋರಾದ ಹಿನ್ನೆಲೆ ಗುರುವಾರ ಮುಂಜಾನೆಯಿಂದ ಕೋಲಾರ (Kolar) ಜಿಲ್ಲೆಯ ಹಲವೆಡೆ ಜಡಿ ಮಳೆಯಾಗುತ್ತಿದೆ. ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಹಾಗೂ ಮಳೆಯ (Rain) ಸಿಂಚನವಾಗುತ್ತಿದೆ. ಆದರೆ ಇಂದು ಮುಂಜಾನೆಯಿಂದ ಜಿಲ್ಲೆಯಲ್ಲಿ ಜೋರು ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡಿದ್ದಾರೆ. ಇದನ್ನೂ ಓದಿ: ನಾಗ್ಪುರ-ಕೋಲ್ಕತ್ತಾ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ – ಓರ್ವನ ಬಂಧನ
Advertisement
Advertisement
ಇನ್ನೂ ನೀರು ಹರಿದು ಬರುವಂತಹ ಜೋರು ಮಳೆಯಾಗಿಲ್ಲವಾದರೂ ತೇವಾಂಶ ಹೆಚ್ಚಾಗಿ ತೋಟಗಾರಿಕೆ ಬೆಳೆಗಳು ಸೇರಿದಂತೆ ರಾಗಿ ಭತ್ತ ಕೊಯ್ಲಿಗೆ ಇದು ಕಂಟಕವಾಗಲಿದೆ. ಕೋಲಾರ ಜಿಲ್ಲೆಯಾದ್ಯಂತ ಮಳೆಯ ಸಿಂಚನ ಮೂಡಿರುವುದು ಸದ್ಯ ಮೇವಿನ ಬವಣೆ ನೀಗಿದೆ. ಇನ್ನೂ ಎರಡು ದಿನ ಮಳೆ ಬರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಕಬ್ಬು ಬೆಲೆ ನಿಗದಿಗಾಗಿ ಹೋರಾಟ- ಸಿಎಂಗೆ ಘೇರಾವ್ ಹಾಕಲು ನಿರ್ಧರಿಸಿದ ಮುಧೋಳ ರೈತರು
Advertisement