ಚೆನ್ನೈ: ಚೆಕ್ ಇನ್ ಬ್ಯಾಗೇಜ್‍ನಲ್ಲಿ ಬ್ಯಾಂಕ್‍ಕ್‍ನಿಂದ (Bangkok) ಅಕ್ರಮವಾಗಿ ಸಾಗಿಸಲಾಗಿದ್ದ 5 ವಿದೇಶಿ ಪ್ರಾಣಿಗಳನ್ನು (Animals) ಚೆನ್ನೈನ (Chennai) ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಮುಂಗುಸಿ ಹಾಗೂ ಕ್ಯೂಕಸ್ ಅನ್ನು ಚೀಲದಲ್ಲಿ ಮರೆ ಮಾಡಲಾಗಿತ್ತು. ಈ ಎಲ್ಲಾ ಪ್ರಾಣಿಗಳು ಬ್ಯಾಂಕಾಕ್‍ನಿಂದ ಬಂದ ಪ್ರಯಾಣಿಕನ (Passenger) ಬ್ಯಾಗ್‍ನಲ್ಲಿತ್ತು. ಅದನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡು ಥೈಲ್ಯಾಂಡ್‍ಗೆ ಕಳುಹಿಸಿದ್ದಾರೆ.
Advertisement
Advertisement
ಮುಂಗುಸಿ ಅಂಗೋಲಾ, ಉತ್ತರ ನಮೀಬಿಯಾ, ದಕ್ಷಿಣ ಆಫ್ರಿಕಾದ ಕ್ವಾಝುಲು-ನಟಾಲ್, ಜಾಂಬಿಯಾ ಮತ್ತು ಪೂರ್ವ ಆಫ್ರಿಕಾಕ್ಕೆ ಸ್ಥಳೀಯವಾಗಿರುವ ಮುಂಗುಸಿ ಜಾತಿಯಾಗಿದೆ. ಇದು ಹಳದಿ, ಕೆಂಪು, ಕಡು ಕಂದು ಬಣ್ಣದಲ್ಲಿದೆ. ಇದನ್ನೂ ಓದಿ: ಡೆಂಗ್ಯೂ ರೋಗಿಗೆ ಡ್ರಿಪ್‍ನಲ್ಲಿ ಮೊಸಂಬೆ ಜ್ಯೂಸ್ ನೀಡಿದ್ದ ಆಸ್ಪತ್ರೆಗೆ ಇದೀಗ ಬುಲ್ಡೋಜರ್ ಭಯ
Advertisement
Advertisement
ಘಟನೆಗೆ ಸಂಬಂಧಿಸಿ ಚೆನ್ನೈನಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪ್ರಯಾಣಿಕನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಹಿಳೆಯನ್ನು ಗುರಾಯಿಸಿದ್ದಕ್ಕೆ ಪೊಲೀಸರಿಂದ ಕಪಾಳಮೋಕ್ಷ – ಸೇಡಿಗೆ ವ್ಯಕ್ತಿ ಮಾಡಿದ್ದೇನು ಗೊತ್ತಾ?