ಚೆನ್ನೈ: ಕಾಯಿಸಿದ ಕಬ್ಬಿಣ ಹಾಗೂ ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ ನೀಡಿ ಮನೆಕೆಲಸ ಮಾಡುತ್ತಿದ್ದ 15 ವರ್ಷದ ಅಪ್ರಾಪ್ತೆ ಕೊಂದು ಗಂಡ-ಹೆಂಡ0ತಿ (Chennai Couple) ಇಬ್ಬರೂ ಎಸ್ಕೇಪ್ ಆಗಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ (Chennai) ನಡೆದಿದೆ.
ಚೆನ್ನೈನ ಅಮಿಂಜಿಕರೈ ಪ್ರದೇಶದ ಮೆಹ್ತಾ ನಗರದಲ್ಲಿರುವ ಫ್ಲಾಟ್‌ನಲ್ಲಿ ಘಟನೆ ನಡೆದಿದ್ದು, ದಂಪತಿ ಅಪ್ರಾಪ್ತೆಯ ಶವವನ್ನು ಶೌಚಾಲಯದಲ್ಲಿಟ್ಟು ಎಸ್ಕೇಪ್ ಆಗಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಸೇರಿ ನಾಲ್ವರನ್ನು ಬಂದಿಸಿದ್ದಾರೆ. ಇದನ್ನೂ ಓದಿ: ನ.7ರ ಒಳಗಡೆ ಬಾಕಿ ಹಣವನ್ನು ಪಾವತಿಸದೇ ಇದ್ದರೆ ವಿದ್ಯುತ್ ಕೊಡಲ್ಲ: ಬಾಂಗ್ಲಾಗೆ ಅದಾನಿ ಡೆಡ್‌ಲೈನ್
- Advertisement -
- Advertisement -
ತನಿಖಾಧಿಕಾರಿಗಳ ಪ್ರಕಾರ, ಅಪ್ರಾಪ್ತೆಯು ಸಾಯುವ ಮೊದಲು ಆಕೆಗೆ ಬಿಸಿ ಕಬ್ಬಿಣ ಮತ್ತು ಸಿಗರೇಟ್‌ನಿಂದ ಸುಡಲಾಗಿದೆ. ಆಕೆಯ ದೇಹದಲ್ಲಿದ್ದ ಸುಟ್ಟ ಗಾಯಗಳು ಚಿತ್ರಹಿಂಸೆಗೆ ಸಾಕ್ಷಿಯಾಗಿವೆ ಎಂದು ಹೇಳಿದ್ದಾರೆ.
- Advertisement -
ಬಳಿಕ ಆರೋಪಿಗಳಾದ ಮೊಹಮ್ಮದ್ ನಿಶಾದ್ ಮತ್ತು ನಾಸಿಯಾ ದಂಪತಿ ಬಾಲಕಿಯ ಶವವನ್ನು ಮನೆಯ ಶೌಚಾಲಯದಲ್ಲಿಟ್ಟು ಪುರುಷನ ಸಹೋದರಿಯ ಮನೆಗೆ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ. ಮೃತ ಬಾಲಕಿಯ ತಾಯಿ ವಿಧವೆಯಾಗಿದ್ದು, ತಂಜಾವೂರಿನಲ್ಲಿ ವಾಸವಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ| ಬುಡಕಟ್ಟು ಸಮುದಾಯದ ವಿಶೇಷ ದೀಪಾವಳಿ – ಯುವತಿಯರು ಮಾತ್ರ ಆಚರಿಸುವ ಗೋದ್ನಾಹಬ್ಬ
- Advertisement -
ಸದ್ಯ ಬಾಲಕಿಯ ಮೃತದೇಹವನ್ನು ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಮರಣೋತ್ತ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.