– ಬಾಲಕಿಯ ಕುಟುಂಬಸ್ಥರಿಗೆ 79,551 ರೂ. ಹಸ್ತಾಂತರ
ಬೆಂಗಳೂರು: ಮಗುವಿನ ಜೀವ ಉಳಿಸಲು ಚೆಂಡೆ ತಂಡ ಹಲವೆಡೆ ಚೆಂಡೆ ಪ್ರದರ್ಶನ ನೀಡಿ ಹಣ ಸಂಗ್ರಹಿಸುವ ಮೂಲಕ ಮಾನವೀಯತೆ ಮರೆದಿದೆ.
ಆಟವಾಡಿಕೊಂಡು ಮನೆಯವರ ಮುದ್ದಿನ ಕಣ್ಮಿಣಿಯಾಗಿದ್ದ ಕುಂದಾಪುರದ ನಿಹಾರಿಕ ಲುಕೇಮಿಯಾ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಿಹಾರಿಕ ತಂದೆ ಮಹೇಶ್ 5 ವರ್ಷದ ಕಂದಮ್ಮನನ್ನು ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಇನ್ನೊಂದಡೆ ಮಹೇಶ್ ತಾಯಿಗೂ ಇತ್ತೀಚೆಗೆಷ್ಟೇ ಕ್ಯಾನ್ಸರ್ ಬಂದಿತ್ತು.
Advertisement
Advertisement
ನಿಹಾರಿಕಳನ್ನು ಮಹೇಶ್ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲದೆ ಎರಡೂವರೆ ವರ್ಷಗಳ ನಿರಂತರವಾದ ಚಿಕಿತ್ಸೆ ನೀಡಿದರೆ, ನಿಹಾರಿಕಳನ್ನು ಉಳಿಸಬಹುದು. ಈ ಚಿಕಿತ್ಸೆಗೆ 10 ಲಕ್ಷ ರೂ. ಖರ್ಚು ಆಗುತ್ತೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
ಈಗ ನಿಹಾರಿಕಗಳ ಸಹಾಯಕ್ಕೆ ಬಂದಿರುವ ಶ್ರೀ ಸಾಯಿ ಚೆಂಡೆ ಬಳಗದ ಟೀಂ ಉಡುಪಿಯ ಹಲವಡೆ ಚೆಂಡೆ ಪ್ರದರ್ಶನವನ್ನು ನೀಡಿ ಚಿಕಿತ್ಸೆಗೆ ಹಣ ಸಂಗ್ರಹವನ್ನು ಮಾಡಿದ್ದಾರೆ. ಈ ಟೀಮ್‍ನ ಸದಸ್ಯರು ಚೆಂಡೆ ಕಲೆಯನ್ನು ಪ್ರದರ್ಶಿಸಿ, ಸದ್ಯ 79,551 ರೂ. ಹಸ್ತಾಂತರ ಮಾಡಿದ್ದಾರೆ.