ದುಬೈ: ಅರಬ್‍ರ ನಾಡಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್ ಕೊನೆಯ ಹಂತಕ್ಕೆ ತಲುಪಿದ್ದು, ಮೊದಲ ಕ್ವಾಲಿಫೈಯರ್ ನಲ್ಲಿ ಗೆದ್ದಿರುವ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ಪ್ರವೇಶಿಸಿ ದಾಖಲೆ ಬರೆದಿದೆ.
Advertisement
ಐಪಿಎಲ್‍ನಲ್ಲಿ ಯಶಸ್ವಿ ತಂಡಗಳ ಪೈಕಿ ಧೋನಿಯ ಚೆನ್ನೈ ತಂಡ ಕೂಡ ಒಂದು. ಐಪಿಎಲ್ ಆರಂಭದಿಂದ ಚೆನ್ನೈ ತಂಡದ ಪರ ಆಡುತ್ತಿರುವ ಧೋನಿ ತಂಡದ ಪ್ರಮುಖ ಶಕ್ತಿ. 2008ರಲ್ಲಿ ಪ್ರಾರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇದೀಗ 14 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದೆ. ತಂಡಗಳ ಪೈಕಿ ಅತೀ ಹೆಚ್ಚು 9 ಬಾರಿ ಚೆನ್ನೈ ತಂಡ ಫೈನಲ್‍ಗೆ ಲಗ್ಗೆ ಇಟ್ಟು 3 ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಇದನ್ನೂ ಓದಿ: ಐಪಿಎಲ್ ಫೈನಲ್‍ಗೆ ಚೆನ್ನೈ – ಸಿಕ್ಸರ್, ಬೌಂಡರಿ ಸಿಡಿಸಿ ದಡ ಸೇರಿಸಿದ ಧೋನಿ
Advertisement
Advertisement
ಚೆನ್ನೈ ತಂಡ 2008ರ ಮೊದಲ ಆವೃತ್ತಿಯಿಂದ ಹಿಡಿದು, 2010, 2011, 2012, 2013, 2015, 2018, 2019, 2021 ಸೇರಿ ಒಟ್ಟು 9 ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. ಇದನ್ನು ಹೊರತು ಪಡಿಸಿ ಮುಂಬೈ ಇಂಡಿಯನ್ಸ್ ತಂಡ 6 ಬಾರಿ ಪ್ರಶಸ್ತಿ ಸುತ್ತಿಗೆ ಏರಿ ಸಾಧನೆ ಮಾಡಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದರೆ ಸಿಗುವ ನಗದು ಬಹುಮಾನವೆಷ್ಟು ಗೊತ್ತಾ?
Advertisement
14 ಆವೃತ್ತಿಗಳ ಪೈಕಿ 12 ಆವೃತ್ತಿಗಳಲ್ಲಿ ಚೆನ್ನೈ ತಂಡ ಭಾಗವಹಿಸಿದರೆ, 2016 ಮತ್ತು 2017ನೇ ವರ್ಷದಲ್ಲಿ ಬ್ಯಾನ್ ಆಗಿತ್ತು. ನಂತರ ಮತ್ತೆ ಕಂಬ್ಯಾಕ್ ಮಾಡಿದ ಚೆನ್ನೈ 2018 ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಮೂಡಿಸಿತ್ತು. ಇದೀಗ ಮತ್ತೆ ಫೈನಲ್ ಪ್ರವೇಶಿಸಿದ್ದು, 4ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿದೆ. ಇದನ್ನೂ ಓದಿ: ಇನ್ಮುಂದೆ ಚೆನ್ನೈ ಪರ ಆಡುತ್ತೀನಾ ಇಲ್ಲವೋ ಗೊತ್ತಿಲ್ಲ: ಧೋನಿ ಅಚ್ಚರಿಯ ಹೇಳಿಕೆ