ಬೆಂಗಳೂರು: ತಬಲನಾಣಿ, `ಕಿರಿಕ್ ಪಾರ್ಟಿ’ ಚಂದನ್ ಆಚಾರ್, ಅಪೂರ್ವ, ಸಂಜನಾ ಹಾಗೂ ಡಾ.ಡಿ.ಎಸ್.ಮಂಜುನಾಥ್ ಹಾಗೂ ಸುಚೇಂದ್ರ ಪ್ರಸಾದ್ ಪ್ರಮುಖ ಭೂಮಿಕೆಯಲ್ಲಿರುವ `ಕೆಮಿಸ್ಟ್ರಿ ಆಫ್ ಕರಿಯಪ್ಪ’ ಯಶಸ್ವಿಯಾಗಿ 25 ದಿನ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಸೆಲೆಬ್ರಿಟಿ ಶೋ ಏರ್ಪಡಿಸಿತ್ತು. `ಗುಳ್ಟು’ ನವೀನ್, ಪ್ರಥಮ್, ನವೀನ್ ಸಜ್ಜು, ಶಶಿಕುಮಾರ್, ಭುವನ್ ಪೊನ್ನಣ್ಣ ಸೇರಿದಂತೆ ಬಿಗ್‍ಬಾಸ್‍ನ ಅನೇಕ ಸ್ಪರ್ಧಿಗಳು ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
`ಚಿತ್ರದಲ್ಲಿ ಕಾಮಿಡಿಯೇ ಪ್ಲಸ್ ಪಾಯಿಂಟ್. ತಬಲ ನಾಣಿ ಟೈಮಿಂಗ್ಸ್ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಹಕಾರಿಯಾಗಿದೆ. ಡೈರೆಕ್ಟರ್ ಕುಮಾರ್ ಎಫರ್ಟ್ ಎದ್ದು ಕಾಣುತ್ತದೆ. ತುಂಬಾ ನೀಟಾದ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ’ ಎಂದು `ಗುಳ್ಟು’ ನವೀನ್ ಅಭಿಪ್ರಾಯಪಟ್ಟರೆ, `ಸಿನಿಮಾ ಆರಾಮಾಗಿ ನೋಡಿಸಿಕೊಂಡು ಹೋಗುತ್ತದೆ. ಮುಗಿಯೋದೇ ಗೊತ್ತಾಗಲ್ಲ. ಕಾಮಿಡಿ ಹಾಗೂ ಮೆಸೇಜ್ ತುಂಬಾ ಚೆನ್ನಾಗಿದೆ’ ಎಂದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಶಶಿಕುಮಾರ್. ಇದೇ ರೀತಿ ಸಿನಿಮಾ ನೊಡಿದವರೆಲ್ಲರೂ ಮೆಚ್ಚುಗೆಯ ಮಾತನಾಡಿ ಚಿತ್ರತಂಡದ ಶ್ರಮಕ್ಕೆ ಬೆನ್ನು ತಟ್ಟಿದ್ದಾರೆ.
ಕನ್ನಡ ಸಂಘದಿಂದ ಚಿತ್ರತಂಡಕ್ಕೆ ಸನ್ಮಾನ:
25 ದಿನ ಪೂರೈಸಿದ ಹಿನ್ನೆಲೆಯಲ್ಲಿ `ಗೆಲುವು ಕನ್ನಡ ಗೆಳೆಯರ ಸಮಿತಿ’ಯ ಕೃಷ್ಣಣ್ಣ ಎಂಬುವವರ ನೇತೃತ್ವದಲ್ಲಿ ಇಡೀ ಥಿಯೇಟರ್‍ನ್ನು ಬುಕ್ ಮಾಡಿ ಸುಮಾರು 150ಕ್ಕೂ ಹೆಚ್ಚು ಕುಟುಂಬದವರು ಸಿನಿಮಾ ನೋಡಿ ಚಿತ್ರತಂಡವನ್ನು ಪ್ರಶಂಸಿಸಿದ್ದಾರೆ. ಚಿಕ್ಕವರಿಂದ ದೊಡ್ಡವರವರೆಗೂ `ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ನೋಡಿ ಚಿತ್ರತಂಡವನ್ನು ಆತ್ಮೀಯವಾಗಿ ಸನ್ಮಾನಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv