ಬೆಂಗಳೂರು: ಚಿಕನ್ ಕಬಾಬ್ ಕಂಡ ತಕ್ಷಣ ಅಹಾ ಎಂದು ತಿನ್ನುವವರು ಈ ಸುದ್ದಿಯನ್ನು ನೋಡಲೇ ಬೇಕು. ಏಕೆಂದರೆ ರಸ್ತೆ ಬದಿಯಲ್ಲಿ ತಿನ್ನುವ ಕಲರ್‌ಫುಲ್ ಕಬಾಬ್ ಅನ್ನು ಕೊಳಕು ಜಾಗದಲ್ಲಿ ತಯಾರಿಸುತ್ತಾರೆ.
ಹಣ ಕೊಟ್ಟು ಸಿಕ್ಕ ಸಿಕ್ಕ ಕಡೆ ಕಬಾಬ್ ತಿಂದರೆ ಫ್ರೀಯಾಗಿ ಕಾಯಿಲೆಗಳು ಕೂಡ ಬರುತ್ತದೆ. ಏಕೆಂದರೆ ಕಬಾಬ್ ತಯಾರಿಸುವ ವ್ಯಕ್ತಿ ಸಿಗರೇಟ್ ಸೇದಿಕೊಂಡು ಅದರ ಹೊಗೆಯನ್ನು ಕಬಾಬ್ ಮಸಾಲೆ ಪಕ್ಕ ಉಫ್ ಉಫ್ ಎಂದು ಉದುತ್ತಾನೆ. ಅಲ್ಲದೆ ಸಿಗರೇಟಿನ ವೇಸ್ಟ್ ಅನ್ನು ಕಬಾಬ್ ಮಸಾಲೆಯ ಪಕ್ಕವೇ ಹಾಕುತ್ತಾನೆ.
Advertisement
Advertisement
ಸಿಗರೇಟು ಸೇದಿದ ಹಾಗೂ ಪದೇಪದೇ ಬಾಯಿಯೊಳಗೆ ಕೈಹಾಕಿರುವ ಅದೇ ಕೈಯಲ್ಲಿ ವ್ಯಕ್ತಿ ಮಸಾಲೆ ರುಬ್ಬುತ್ತಾನೆ. ಇರೋ ಬರೋ ಕೆಮಿಕಲ್ ಜೊತೆಗೆ ಸಿಗರೇಟಿನ ಹೊಗೆ, ಅಳಿದುಳಿದ ಸಿಗರೇಟಿನ ಅವಶೇಷವೂ ಕೂಡ ಮಸಾಲೆಯ ಕಬಾಬ್‌ನೊಳಗೆ ಚಂದಗೆ ಬೆರೆತು ಹೋಗುತ್ತೆ.
Advertisement
Advertisement
ರಸ್ತೆ ಬದಿಯಲ್ಲಿ ಕೊಂಚವೂ ಸ್ವಚ್ಛತೆಯಂತೂ ಇಲ್ಲ. ಗಲೀಜು ಗಲೀಜಾಗಿರುವ ಜಾಗದಲ್ಲಿ ಈ ಕಬಾಬ್‌ಗಳು ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ತಯಾರಾಗುತ್ತೆ. ಅಲ್ಲಲ್ಲಿ ನೊಣಗಳು ಹಾರಾಡುವ ಗಲೀಜು ಜಾಗದಲ್ಲಿ ಚೆಲ್ಲಿರುವ ಚಿಕನ್ ತುಂಡುಗಳು, ತೊಳೆಯದ ಕೈಯಲ್ಲಿ ಮಸಾಲೆ ಬೆರೆಸುವ ಕೈಗಳು, ಕಬಾಬ್ ಕರಿಯುವ ಬಾಣಲೆ ನೋಡಿದ್ದರೆ ಜನರು ಕಬಾಬ್ ತಿನ್ನುವುದನ್ನು ಬಿಟ್ಟು ಬಿಡುತ್ತಾರೆ.
ಸಿಕ್ಕ ಸಿಕ್ಕ ಲೋಕಲ್ ಕೆಮಿಕಲ್‌ಗಳನ್ನು ಈ ಕಬಾಬ್‌ಗೆ ಬಳಕೆ ಮಾಡುತ್ತಾರೆ. ಅಲ್ಲದೆ ಈ ಕಬಾಬ್ ಟೇಸ್ಟ್ ಬರುವುದಕ್ಕೆ ಅಜಿನಾಮೋಟೋ ಎನ್ನುವ ಡೇಂಜರಸ್ ಪೌಡರ್‌ಗಳ ಬಳಕೆಯನ್ನು ಮಾಡಲಾಗುತ್ತೆ. ಇಂತಹ ಕಬಾಬ್ ಸೇವಿಸಿದ್ದರೆ ಹೊಟ್ಟೆಯ ಸಮಸ್ಯೆಯ ಜೊತೆಗೆ ಕಲರ್ ಬರುವುದ್ದಕ್ಕೆ ಪೌಡರ್, ಟೇಸ್ಟಿಂಗ್ ಪೌಡರ್ ಹಾಕುವುದರಿಂದ ಕ್ಯಾನ್ಸರ್, ಕರುಳು ಬೇನೆಯಂತಹ ಕಾಯಿಲೆನೂ ಬರುತ್ತೆ.