ಉಡುಪಿ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಉಡುಪಿ ತೆಕ್ಕಟ್ಟೆಯ ಪೆಟ್ರೋಲ್ ಪಂಪ್ ಸೀಲ್ ಮಾಡಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ.
Advertisement
ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಯ ಮೂಲಕ ಮಂಡ್ಯವನ್ನು ಸೋಂಕಿತ ವ್ಯಕ್ತಿ ಸೇರಿಕೊಂಡಿದ್ದ. ಉಡುಪಿ ಜಿಲ್ಲೆಯ ತೆಕ್ಕಟ್ಟೆಯ ಶಿವಪ್ರಸಾದ್ ಪೆಟ್ರೋಲ್ ಪಂಪ್ ನಲ್ಲಿ ಇಳಿದು, ಸ್ನಾನ ಮಾಡಿ ಟಿಫನ್ ಮಾಡಿದ್ದ. ಆನಂತರ ಮೂರು ಟೋಲ್ ಗಳ ಮೂಲಕ ಉಡುಪಿ ಜಿಲ್ಲೆಯಿಂದ ಪಾಸಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗಿಗೆ ಸೇರಿಕೊಂಡಿದ್ದ. ಕೊರೊನಾ ಪಾಸಿಟಿವ್ ಬಂದಿರುವುದರಿಂದ ಉಡುಪಿ ಜಿಲ್ಲೆಯ ಆಯ್ದ ಭಾಗಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
Advertisement
Advertisement
ಪೆಟ್ರೋಲ್ ಪಂಪ್ ಸೀಲ್ ಮಾಡಿರುವ ಪೊಲೀಸರು ಇಂದು ಪೆಟ್ರೋಲ್ ಪಂಪ್ ಶೌಚಾಲಯ, ಪೆಟ್ರೋಲ್ ಡೀಸೆಲ್ ಹಾಕುವ ಏರಿಯಾದಲ್ಲಿ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಸಾಸ್ತಾನ ಮತ್ತು ಶಿರೂರು ಟೋಲ್ ಗೇಟ್ ಸುತ್ತಲೂ ರಾಸಾಯನಿಕವನ್ನು ಸಿಂಪಡಣೆ ಮಾಡಲಾಗಿದೆ. ಈ ಭಾಗದಲ್ಲಿ ಜನ ಓಡಾಡಬಾರದು ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿಕೊಂಡು ಓಡಾಡಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಸಾಸ್ತಾನ ಟೋಲ್ ಸಿಬ್ಬಂದಿ ಜೊತೆ ಮಂಡ್ಯದ ಸೋಂಕಿತ ಮಾತು – 6 ಮಂದಿ ಕ್ವಾರಂಟೈನ್
Advertisement
ಶಿವಪ್ರಸಾದ್ ಪೆಟ್ರೋಲ್ ಪಂಪ್ ಮತ್ತು ಟೋಲ್ ಗೇಟ್ ನಲ್ಲಿ ಕೆಲಸ ಮಾಡ್ತಾ ಇದ್ದ ಕೊಟ್ಟು ಹದಿಮೂರು ಮಂದಿಯನ್ನು ಈಗ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಸುಮಾರು ಒಂದು ಕಿಲೋಮೀಟರ್ ಏರಿಯಾದಲ್ಲಿ ವಾಹನ ಓಡಾಟ ಕಡಿಮೆಯಿದೆ.