ಮಂಡ್ಯ: ಎಲ್ಲರೂ ನಮ್ಮ ವಿರುದ್ಧ ಇದ್ದಾಗಲೇ ಚುನಾವಣೆ ಎದುರಿಸಿದ್ದೇವೆ. ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಕಣ್ಣೀರಿಗೆ ತಲೆಕೆಡಿಸಿಕೊಳ್ಳಬೇಡಿ. ಅವರಿಗೆ ಕೊಡುವ ಗೌರವವನ್ನು ಕೊಟ್ಟಿದ್ದೇವೆ ಎಂದು ಶಾಸಕ ಎನ್ ಚಲುವರಾಯಸ್ವಾಮಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಹೆಚ್‍ಡಿಕೆ ಮತ್ತು ಹೆಚ್‍ಡಿಡಿ ಅವರಿಗೆ ಕೊಡಬೇಕಾದ ಸ್ಥಾನವನ್ನ ಈ ಸಮಾಜ ಕೊಟ್ಟಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಆದಿ ಚುಂಚನಗಿರಿ ಮಠಕ್ಕೆ ಅವರು ಗೌರವ ಕೊಟ್ಟಿಲ್ಲ. ರಾಜಕಾರಣದ ಆರವತ್ತು ವರ್ಷಗಳಲ್ಲಿ ಒಬ್ಬ ಒಕ್ಕಲಿಗ ವ್ಯಕ್ತಿಯನ್ನು ಒಂದು ಒಳ್ಳೆಯ ಸ್ಥಾನಕ್ಕೆ ತಂದಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಬೇಕಿದೆ. ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಚುಂಚನಗಿರಿ ಮಠಕ್ಕೆ ಅವರು ಗೌರವ ಕೊಟ್ಟಿಲ್ಲ ಅಂತಾ ವಾಗ್ದಾಳಿ ನಡೆಸಿದ್ರು.
Advertisement
ಒಂದು ಉತ್ತಮ ಸ್ಥಾನವನ್ನು ಒಬ್ಬ ರೈತ, ಉದ್ಯೋಗಸ್ಥ, ಅಧಿಕಾರಿ, ರಾಜಕಾರಣಿ ಯಾರದ್ದಾದರೂ ಒಂದು ಹೆಸರು ಹೇಳಲು ಹೇಳಲಿ. ಇಂದು ನಮ್ಮ ನಮ್ಮ ಬದುಕನ್ನು ನಾವೇ ನೋಡಿಕೊಳ್ಳಬೇಕಿದೆ. ಹಾಗಾಗಿ ನಮ್ಮ ತಾಲೂಕಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮೂಲಕ ನಮ್ಮೆಲ್ಲರ ಅಭಿವೃದ್ಧಿ ಮಾಡಿಕೊಳ್ಳಬೇಕಿದೆ. ಚುನಾವಣೆ ಮುಗಿಯುವವರೆಗೂ ಮೂವತ್ತು ದಿವಸ ಎಲ್ಲ ಕೆಲಸ ಬಿಟ್ಟು ಚುನಾವಣೆ ಕಡೆ ಕೇಂದ್ರೀಕರಿಸಿ ಅಂತಾ ಕಾರ್ಯಕರ್ತರಿಗೆ ಕರೆ ಕೊಟ್ಟರು.