ಬೆಂಗಳೂರು: ಕ್ಷಿಪ್ರ ಕ್ರಾಂತಿಯ ಕುರಿತು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಬಿದ್ದರೂ ಪರವಾಗಿಲ್ಲ. ರಾಜೀನಾಮೆ ನೀಡಿದ ಜೆಡಿಎಸ್ ಶಾಸಕರ ಮನವೊಲಿಸಬೇಡಿ ಎಂದು ಇತರ ಶಾಸಕರಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಭಾನುವಾರ ತಾಜ್‍ವೆಸ್ಟ್‍ಎಂಡ್‍ನಲ್ಲಿ ನಡೆದ ಶಾಸಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಶಾಸಕರಿಗೆ ಖಡಕ್ ವಾರ್ನ್ ಮಾಡಿದ್ದು, ರಾಜೀನಾಮೆ ಕೊಟ್ಟ ಶಾಸಕರ ವಿರುದ್ಧ ಸಿಎಂ ಗರಂ ಆಗಿದ್ದಾರೆ. ನಂಬಿಕೆ ದ್ರೋಹ ಮಾಡಿ ಹೋದವರನ್ನು ಮನವೊಲಿಸುವ ಅವಶ್ಯಕತೆ ಇಲ್ಲ. ಯಾರೂ ಅವರ ಮನವೊಲಿಸುವ ಕೆಲಸ ಮಾಡಬೇಡಿ. ಹೋದವರು ಹೋಗಲಿ, ಅವರು ನಂಬಿಕೆಗೆ ಅರ್ಹರಲ್ಲ. ಉಳಿದ ನೀವೆಲ್ಲಾ ಶಾಸಕರು ಒಟ್ಟಾಗಿರಿ. ಆಪರೇಷನ್ ಕಮಲಕ್ಕೆ ಒಳಗಾಗಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ಒಗ್ಗಟ್ಟು ಪ್ರದರ್ಶನ ಮಾಡಿ, ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ ಎಂದು ಜೆಡಿಎಸ್ ಶಾಸಕರಿಗೆ ತಿಳಿಸಿದ್ದಾರೆ. ಆದರೆ, ಸಿಎಂ ಕಟು ನಿರ್ಧಾರದಿಂದ ಸರ್ಕಾರಕ್ಕೆ ಆಪತ್ತು ತಪ್ಪಿದ್ದಲ್ಲ. ಸಂಖ್ಯಾಬಲದ ಕೊರತೆಯಿಂದ ಮೈತ್ರಿ ಸರ್ಕಾರ ಬಿದ್ದರೂ ಅಚ್ಚರಿ ಪಡಬೇಕಿಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಅವರು ಅಭಿಪ್ರಾಯ ಪಟ್ಟಿದ್ದಾರೆ.